ಸಿಡ್ನಿ: ಬ್ರಿಟನ್‌ನ ಪ್ರಾಣಿ ತಜ್ಞನೊಬ್ಬ ಡಜನ್‌ಗಟ್ಟಲೆ ನಾಯಿಗಳ ಮೇಲೆ ಅತ್ಯಾಚಾರವೆಸಗಿ, ಅವುಗಳನ್ನು ಹತ್ಯೆಗೈದು ಅದನ್ನು ಚಿತ್ರೀಕರಿಸಿದ ಪೈಶಾಚಿಕ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ನ್ಯಾಯಾಲಯ ಆತನಿಗೆ 249 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿ ಆದೇಶಿಸಿದೆ.
ಆಯಡಮ್ ಬ್ರಿಟ್ಟಾನ್ ಎಂಬ ಪ್ರಾಣಿ ತಜ್ಞ ಬಿಬಿಸಿ ಮತ್ತು ನ್ಯಾಷನಲ್ ಜಿಯಾಗ್ರಾಫಿಕ್ ಚಾಲನ್‌ನೊಂದಿಗೆ ಕೆಲಸ ಮಾಡಿದ್ದ. ವಿಕೃತ ಮನಸ್ಸಿನವನಾದ ಈತ ಡಜನ್‌ಗಟ್ಟಲೆ ನಾಯಿಗಳ ಮೇಲೆ ಅವು ಸಾಯುವವರೆಗೂ ಅತ್ಯಾಚಾರವೆಸಗಿದ್ದಾನೆ. ಅವುಗಳನ್ನು ಚಿತ್ರೀಕರಿಸಿ ಅಂತರ್ಜಾಲ ತಾಣದಲ್ಲಿ ಹಂಚಿಕೊಂಡಿದ್ದಾನೆ ಎಂದು ಆಸ್ಟ್ರೇಲಿಯಾದ ನ್ಯಾಯಾಲಯ ಹೇಳಿರುವುದನ್ನು ಬಿಬಿಸಿ ವರದಿ ಮಾಡಿತ್ತು.
ಈ ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಂಡಿಸಲಾದ ವಿಡಿಯೊ ಸಾಕ್ಷ್ಯಗಳನ್ನು ವೀಕ್ಷಿಸುವುದು ಅಸಾಧ್ಯ. ಇದನ್ನು ನೋಡುವವರು ಮಾನಸಿಕ ಆಘಾತಕ್ಕೊಳಗಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯದಲ್ಲಿದ್ದವರನ್ನು ನ್ಯಾಯಾಧೀಶರು ಹೊರಕ್ಕೆ ಕಳುಹಿಸಿದರು. ಈ ಪ್ರಕರಣ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಮ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ವಿಕೃತ ಕಾಮಾಸಕ್ತಿ ಹೊಂದಿದ್ದ ಬ್ರಿಟ್ಟಾನ್, 2014ರಿಂದಲೇ ತನ್ನ ಸಾಕು ಪ್ರಾಣಿಗಳ ಮೇಲೆ ಹಾಗೂ ಈತನ ಬಳಿ ಬಿಡುತ್ತಿದ್ದ ಇತರರ ನಾಯಿಗಳ ಮೇಲೆ ಅತ್ಯಾಚಾರ ಎಸಗುವುದನ್ನು ಪ್ರಾರಂಭಿಸಿದ್ದ. ಕೆಲಸದ ಒತ್ತಡ ಹಾಗೂ ಪ್ರಯಾಣದ ಸಂದರ್ಭದಲ್ಲಿ ಈತನ ಬಳಿ ತಮ್ಮ ಸಾಕು ಪ್ರಾಣಿಗಳನ್ನು ಹಲವರು ಬಿಟ್ಟು ಹೋಗುತ್ತಿದ್ದರು. ಇವುಗಳನ್ನು ಶಿಪ್ ಕಂಟೈನರ್‌ನಲ್ಲಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಈತ ಬಳಸಿಕೊಳ್ಳುತ್ತಿದ್ದ. ಇದನ್ನು ಆತ 'ಹಿಂಸೆಯ ಕೊಠಡಿ' ಎಂದು ಕರೆಯುತ್ತಿದ್ದ ಎಂದು ಸರ್ಕಾರಿ ವಕೀಲರು ಆತನ ವಿರುದ್ಧ ಆರೋಪಿಸಿದ್ದರು.
ಪ್ರಾಣಿ ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿರುವ ಬ್ರಿಟ್ಟಾನ್ 2022ರಲ್ಲಿ ಬಂಧನಕ್ಕೊಳಗಾಗಿದ್ದ. ಆಸ್ಟ್ರೇಲಿಯಾದ ಉತ್ತರ ವಲಯದ ಪೊಲೀಸರು ಈತನನ್ನು ಬಂಧಿಸಿ, ಅವನ ಬಳಿ ಇದ್ದ ಕ್ಯಾಮೆರಾ ಹಾಗೂ ವಿಡಿಯೊಗಳನ್ನು ವಶಪಡಿಸಿಕೊಂಡಿದ್ದರು. ಬಂಧನಕ್ಕೆ 18 ತಿಂಗಳು ಮೊದಲು ಈತ ಒಟ್ಟು 42 ನಾಯಿಗಳ ಮೇಲೆ ಅತ್ಯಾಚಾರವೆಸಗಿದ್ದ. ಇದರಲ್ಲಿ 39 ನಾಯಿಗಳು ಮೃತಪಟ್ಟಿವೆ. ಈತನ ಮನೆಯಲ್ಲಿ ಮಕ್ಕಳ ದೌರ್ಜನ್ಯಕ್ಕೆ ಬಳಸುವ ಕೆಲ ವಸ್ತುಗಳು ಪತ್ತೆಯಾಗಿದ್ದವು. ಹೀಗಾಗಿ ಈತನ ಮೇಲೆ ಒಟ್ಟು 60 ಪ್ರಕರಣಗಳು ದಾಖಲಾಗಿದ್ದವು.