ತಿರುವನಂತಪುರ: 1977ರ ಜನವರಿ 1ರ ಮೊದಲು ಅರಣ್ಯ ಭೂಮಿಯಲ್ಲಿ ವಲಸೆ ಬಂದು ನೆಲೆಸಿರುವವರಿಗೆ ಅನ್ವಯವಾಗುವ ಭೂ ಹಿಡುವಳಿ ನಿಯಮಗಳ ಪ್ರಕಾರ ಭೂ ಹಕ್ಕುಪತ್ರ ನೀಡುವ ಪ್ರಕ್ರಿಯೆಯ ಭಾಗವಾಗಿ ಮಾರ್ಚ್ 1ರಿಂದ ನಡೆದ ಮಾಹಿತಿ ಸಂಗ್ರಹಣೆ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದವರು ಜುಲೈ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಕಂದಾಯ ಇಲಾಖೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸುವ ಕ್ರಮಗಳ ಭಾಗವಾದ ಕಂದಾಯ ಇಲಾಖೆ ಸಭೆಯ ನಿರ್ಣಯದ ಮೇರೆಗೆ ಈ ಹಿಂದೆ ಅರ್ಜಿ ಸಲ್ಲಿಸಲು ಸಾಧ್ಯವಾಗದವರಿಗೆ ಅರ್ಜಿ ಸಲ್ಲಿಸಲು ಅನುಕೂಲ ಕಲ್ಪಿಸಲಾಗಿದೆ.
ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಪರಿಶೀಲನೆ ನಡೆದ ಪ್ರದೇಶಗಳಲ್ಲಿ ಜಂಟಿ ಪರಿಶೀಲನಾ ಪಟ್ಟಿಗೆ ಸೇರ್ಪಡೆಯಾಗದ ಅರ್ಹ ಫಲಾನುಭವಿಗಳು, ಜಂಟಿ ಪರಿಶೀಲನೆ ನಡೆಸದ ಪ್ರದೇಶದ ನಿವಾಸಿಗಳು, ಆ. ವಿವಿಧ ಕಾರಣಗಳಿಂದ ಇಲ್ಲಿಯವರೆಗೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸದಿರುವವರು ಆಯಾ ಗ್ರಾಮ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.