ಕಾಸರಗೋಡು: ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಮತ್ತು ಉದ್ಯೋಗಾವಕಾಶಗಳ ಬಗ್ಗೆ ತಿಳಿಸಲು ಕಾಸರಗೋಡು ಜಿಲ್ಲಾ ಮಾಹಿತಿ ಕಛೇರಿಯಲ್ಲಿ ಕನ್ನಡ ಅನುವಾದಕರನ್ನಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ನೇಮಿಸಲಾಗುತ್ತಿದೆ.
ಪದವಿ ವಿದ್ಯಾರ್ಹತೆಯೊಂದಿಗೆ ಕನ್ನಡ-ಮಲಯಾಳ ಭಾಷಾಂತರದ ಜ್ಞಾನ ಹೊಂದಿದ 20ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಪತ್ರಿಕೋದ್ಯಮ ತಿಳಿದವರಿಗೆ ಆದ್ಯತೆ ನೀಡಲಾಗುವುದು. ನೇಮಕಾತಿ ಒಂದು ವರ್ಷ ಕಾಲಾವಧಿಯದ್ದಾಗಿದ್ದು, ಆಸಕ್ತ ಅಭ್ಯರ್ಥಿಗಳು ಜುಲೈ 25 ರಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಜಿಲ್ಲಾ ಮಾಹಿತಿ ಕಛೇರಿಯಲ್ಲಿ ಬಿಳಿ ಕಾಗದದ ಮೇಲೆ ಸಿದ್ಧಪಡಿಸಿದ ಅರ್ಜಿ, ವಿದ್ಯಾರ್ಹತೆಯ ಮೂಲ ಪ್ರಮಾಣ ಪತ್ರಗಳ(ಫೆÇೀಟೋಕಾಪಿ ಇಟ್ಟುಕೊಳ್ಳಬೇಕು), ಕೆಲಸದ ಅನುಭವದ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (04994-255466)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.