ವಿಶ್ವಸಂಸ್ಥೆ: ಪ್ರಧಾನಿ ನರೇಂದ್ರ ಮೋದಿ ಅವರು ಸೆ. 26ರಂದು ನಡೆಯುವ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಾಮಾನ್ಯ ಸಭೆ (ಯುಎನ್‌ಜಿಎ) ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ವಿಶ್ವಸಂಸ್ಥೆ ಪ್ರಕಟಿಸಿದ 'ರಾಷ್ಟ್ರಗಳ ಮುಖ್ಯಸ್ಥರ' ಭಾಷಣಕಾರರ ತಾತ್ಕಾಲಿಕ ಪಟ್ಟಿಯಲ್ಲಿ ಮೋದಿ ಹೆಸರು ಕೂಡ ಇದೆ.

ಸೆ.24ರಿಂದ 30ರವರೆಗೆ ವಿಶ್ವಸಂಸ್ಥೆಯ 79ನೇ ಸಾಮಾನ್ಯ ಸಭೆಯು ನಡೆಯಲಿದೆ.
ಸೋಮವಾರ ಪ್ರಕಟಿಸಿದ ಸರ್ಕಾರದ ಮುಖ್ಯಸ್ಥರ ಸಂಭಾವ್ಯರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಸರು ಕೂಡ ಇದೆ. ಹಾಜರಾತಿ ಸೇರಿದಂತೆ ಇನ್ನಿತರ ಬದಲಾವಣೆಗಳು ಕಂಡುಬಂದರೆ, ನಂತರ ಪರಿಷ್ಕರಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಬ್ರೆಜಿಲ್ ದೇಶದ ಅಧ್ಯಕ್ಷರು ಮೊದಲಿಗೆ ಭಾಷಣ ಮಾಡುವ ಮೂಲಕ ಉನ್ನತ ಮಟ್ಟದ ಸಭೆಗೆ ಚಾಲನೆ ನೀಡಲಿದ್ದಾರೆ. ಇದಾದ ಬಳಿಕ ಅಮೆರಿಕ ಅಧ್ಯಕ್ಷ ಜೊ ಬೈಡನ್ ಮಾತನಾಡಲಿದ್ದಾರೆ. ಇದೇ ನವೆಂಬರ್‌ಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಬೈಡನ್ ಅಧ್ಯಕ್ಷರಾಗಿ ವಿಶ್ವಸಂಸ್ಥೆ ವೇದಿಕೆಯಲ್ಲಿ ಕೊನೆಯ ಭಾಷಣ ಮಾಡಲಿದ್ದಾರೆ.
ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ. 2021ರ ಸೆ.21ರಂದು ಈ ಹಿಂದೆ ಮೋದಿ ಇಲ್ಲಿ ಮಾತನಾಡಿದ್ದರು.