ಕಣ್ಣೂರು: ಭಾರೀ ಮಳೆ ಹಿನ್ನೆಲೆಯಲ್ಲಿ 79 ಕುಟುಂಬಗಳ 277 ಮಂದಿಯನ್ನು ಜಿಲ್ಲೆಯ ತಲಶ್ಶೇರಿ, ತಳಿಪರಂಬ ಮತ್ತು ಇರಿಟ್ಟಿ ತಾಲೂಕಿನ ಏಳು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ತಲಶ್ಶೇರಿ ತಾಲೂಕಿನಲ್ಲಿ 66 ಕುಟುಂಬಗಳ 235 ಮಂದಿಯನ್ನು ಐದು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಅವರಲ್ಲಿ 61 ಮಕ್ಕಳು.
ತ್ರಿಪಂಗೋತೂರಿನ ನರಿಕೋಟ್ ಮಾಲಾ ಸಾಂಸ್ಕೃತಿಕ ಕೇಂದ್ರದಲ್ಲಿ ಆರಂಭಿಸಿರುವ ಶಿಬಿರದಲ್ಲಿ 10 ಕುಟುಂಬಗಳ 31 ಮಂದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಟಿರೂರಿನ ಸೈಕ್ಲೋನ್ ಶೆಲ್ಟರ್‌ನಲ್ಲಿ ಆರು ಕುಟುಂಬಗಳ 17 ಮಂದಿ ತಂಗಿದ್ದಾರೆ. 15 ಕುಟುಂಬಗಳ 57 ಜನರನ್ನು ಶಿವಪುರದ ಕುಂಡೇರಿ ಪೋಯಿಲ್ ಎಲ್‌ಪಿ ಶಾಲೆಯಲ್ಲಿ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಶಿವಪುರಂ ಕುಂಡೇರಿ ಪೊಯಿಲ್‌ನಲ್ಲಿರುವ ವಾಗ್ಭಟಾನಂದ ಸಾಂಸ್ಕೃತಿಕ ಕೇಂದ್ರದಲ್ಲಿ 28 ಕುಟುಂಬಗಳಿಗೆ ಸೇರಿದ 103 ಜನರನ್ನು ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಶಿವಪುರದ ಮಲ್ಲನ್ನೂರು ಚಿತ್ರಾ ಎಂಬುವವರ ಮನೆಯಲ್ಲಿ ಏಳು ಕುಟುಂಬಗಳ 27 ಮಂದಿ (ತಾತ್ಕಾಲಿಕವಾಗಿ) ವಾಸವಾಗಿದ್ದಾರೆ.
ತಾಲೂಕಿನ ತಳಿಪರಂಬ ಚಮಗೈನಿ ಮಾಪ್ಪಿಳ ಎಲ್ ಪಿ ಶಾಲೆಯಲ್ಲಿ ಆರಂಭಿಸಿರುವ ಶಿಬಿರದಲ್ಲಿ ಏಳು ಕುಟುಂಬಗಳ 19 ಮಂದಿ ವಾಸವಾಗಿದ್ದಾರೆ. ಇರಿಟ್ಟಿ ತಾಲೂಕಿನ ಕಣಿಚಾರ್ ಸಾಂಸ್ಕೃತಿಕ ಕೇಂದ್ರದಲ್ಲಿ ಆರು ಕುಟುಂಬಗಳ 23 ಸದಸ್ಯರು ವಾಸಿಸುತ್ತಿದ್ದಾರೆ.
ಇರಿಟ್ಟಿ ತಾಲೂಕಿನ ಚವಸ್ಸೆರಿ ಅಂಚೆ ಕಚೇರಿ ಬಳಿ ಬೃಹತ್ ಬಂಡೆ ಕುಸಿದಿದ್ದು, ಐದು ಕುಟುಂಬಗಳನ್ನು ಸಂಬAಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.