ತಿರುವನಂತಪುರ: ಇಲ್ಲಿನ ನಿವಾಸಿಯೊಬ್ಬರಿಗೆ ಆನ್‌ಲೈನ್ ಮೂಲಕ ₹2 ಕೋಟಿ ವಂಚನೆ ಮಾಡಿದ್ದ ಕೇರಳದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರ: ಇಲ್ಲಿನ ನಿವಾಸಿಯೊಬ್ಬರಿಗೆ ಆನ್‌ಲೈನ್ ಮೂಲಕ ₹2 ಕೋಟಿ ವಂಚನೆ ಮಾಡಿದ್ದ ಕೇರಳದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೋಯಿಕ್ಕೋಡ್‌ನ ಸಾದಿಕ್ (48), ಇಡುಕ್ಕಿಯ ಶಫೀಕ್ (37), ವಡಗರದ ಸಾದಿಕ್ (24) ಹಾಗೂ ತ್ರಿಶ್ಶೂರ್‌ನ ನಂದು ಕೃಷ್ಣ (21) ಎಂದು ಗುರುತಿಸಲಾಗಿದೆ.
ಆರೋಪಿಗಳು ವಿದೇಶದಿಂದಲೇ ಈ ಯೋಜನೆಯನ್ನು ರೂಪಿಸಿ, ಕಾಂಬೋಡಿಯಾದ ಕಾಲ್ ಸೆಂಟರ್ ಮೂಲಕ ಕಾರ್ಯರೂಪಕ್ಕೆ ತಂದಿದ್ದರು ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಂತ್ರಸ್ತ ವ್ಯಕ್ತಿಯೊಂದಿಗೆ ಆರೋಪಿಗಳು ಸ್ನೇಹ ಸಂಪಾದಿಸಿದ್ದರು. ಬಳಿಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪುಸಲಾಯಿಸಿ, ₹2 ಕೋಟಿ ವಂಚಿಸಿದ್ದರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.