ಕೊಂಡಗಾಂವ್: ಛತ್ತೀಸಗಢದ ಕೊಂಡಗಾಂವ್ ಜಿಲ್ಲೆಯಲ್ಲಿ ನಕ್ಸಲರು ಅಡಗಿಸಿಟ್ಟಿದ್ದ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಳ್ಳುವ ಮೂಲಕ ಸಂಭವಿಸಬಹುದಾದ ದುರಂತವನ್ನು ಸೇನಾ ಸಿಬ್ಬಂದಿ ತಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇರಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟೊಕೊಡೋ ಮತ್ತು ಕಿಲೆನಾರ್ ಗ್ರಾಮಗಳ ನಡುವೆ ಭದ್ರತಾ ಪಡೆ ಹಾಗೂ ಪೊಲೀಸರನ್ನು ಗುರಿಯಾಗಿಸಿಕೊಂಡು 5 ಕೆ.ಜಿ ತೂಕದ ಸುಧಾರಿತ ಸ್ಫೋಟಕ ಸಾಧನಗಳನ್ನು ಭೂಮಿಯಡಿ ಇರಿಸಲಾಗಿತ್ತು.
ರಾಜ್ಯ ಸರ್ಕಾರದ ಪ್ರಕಾರ, 2023ರ ಡಿಸೆಂಬರ್‌ನಿಂದ 2024ರ ಜೂನ್ ನಡುವೆ 273 ನಕ್ಸಲ್ ಸಂಬಂಧಿತ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ 92 ಎನ್ ಕೌಂಟರ್ ಘಟನೆಗಳು ನಡೆದಿವೆ.
ನಕ್ಸಲರ ವಿರುದ್ಧ ನಡೆದ ಎನ್ ಕೌಂಟರ್‌ಗಳಲ್ಲಿ 19 ಮಂದಿ ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದು, 88 ಮಂದಿ ಗಾಯಗೊಂಡಿದ್ದರು. ಮಾವೋದಿಗಳ ದಾಳಿಯಲ್ಲಿ 34 ಮಂದಿ ನಾಗರಿಕರು ಮೃತಪಟ್ಟಿದ್ದರು. 137 ನಕ್ಸಲರನ್ನು ಗುಂಡಿಕ್ಕಿ ಕೊಲ್ಲಲಾಯಿತು ಮತ್ತು 171 ಮಂದಿಯನ್ನು ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.