HEALTH TIPS

ಪುಷ್ಪಾ-2 ವಿಲನ್ ಮೇಲೆ ಸುಮೋಟೋ ಕೇಸ್?! ಅಸಲಿಗೆ ಏನಾಯ್ತು?

        ತಿರುವನಂತಪುರಂ: ಪುಷ್ಪಾ -2 ವಿಲನ್ ಗೆ ಕಾನೂನು ಕಂಟಕ ಎದುರಾಗಿದೆ. ಆಸ್ಪತ್ರೆಯೊಂದರಲ್ಲಿ ಕಾನೂನು ಬಾಹೀರವಾಗಿ ಚಿತ್ರೀಕರಣ ನಡೆಸಿದ ಸಂಬಂಧ ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ. ಈ ಕುರಿತು ಚಿತ್ರತಂಡ ಪ್ರತಿಕ್ರಿಯೆ ನೀಡಿದೆ.

           ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಫಹದ್ ಫಾಜಿಲ್ ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಈ ನಡುವೆ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಗೊತ್ತೇ ಇದೆ. ಈ ನಟನ ವಿರುದ್ಧ ಕೇರಳ ಮಾನವ ಹಕ್ಕುಗಳ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಜತೆಗ ಅವರ ವಿರುದ್ಧ ಸುಮೋಟೋ ಪ್ರಕರಣವೂ ದಾಖಲಾಗಿದೆ.

               ಮಲಯಾಳಂ ಚಿತ್ರರಂಗದಲ್ಲಿ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುವ ಫಹಾದ್ ಫಾಜಿಲ್ ಮಲಯಾಳಂ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಗುರುವಾರ ರಾತ್ರಿ ಎರ್ನಾಕುಲಂ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದ ಅಲ್ಲಿನ ರೋಗಿಗಳು ಪರದಾಡಿದ್ದಾರೆ ಎಂದು ವರದಿಯಾಗಿದೆ. ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಸಾಮಾನ್ಯ ರೋಗಿಗಳನ್ನು ಸಹ ಅನುಮತಿಸಲಾಗುವುದಿಲ್ಲ. ಇಂತಹ ಕಡೆ ಶೂಟಿಂಗ್ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

              ಇದು ಉನ್ನತ ಅಧಿಕಾರಿಗಳ ಗಮನಕ್ಕೆ ಹೋಗಿತ್ತು. ಈ ಬಗ್ಗೆ ಎರ್ನಾಕುಲಂ ಜಿಲ್ಲಾ ವೈದ್ಯಾಧಿಕಾರಿ ಬೀನಾ ಕುಮಾರಿ ಘಟನೆಯ ಸಂಪೂರ್ಣ ವರದಿ ನೀಡುವಂತೆ ಆದೇಶಿಸಿದ್ದಾರೆ.

ಒಂದೆಡೆ ರೋಗಿಗಳ ಚಿಕಿತ್ಸೆ ನಡೆಯುತ್ತಿದ್ದರೆ ಮತ್ತೊಂದೆಡೆ ರಾತ್ರಿಯಿಡೀ ಆಸ್ಪತ್ರೆಯಲ್ಲಿ ಚಿತ್ರತಂಡ ಗಲಾಟೆ ಮಾಡಿದೆ ಎನ್ನುತ್ತಾರೆ ರೋಗಿಗಳು.

                ಆದರೆ ಈ ಆರೋಪಗಳನ್ನು ಚಿತ್ರತಂಡ ತಳ್ಳಿಹಾಕಿದೆ. ಚಿತ್ರೀಕರಣಕ್ಕಾಗಿ ಆಸ್ಪತ್ರೆಯವರಿಗೆ 10ಸಾವಿರ ರೂ. ಸಂಭಾವನೆ ಪಡೆದಿರುವುದಾಗಿ ಬಹಿರಂಗಪಡಿಸಿದ್ದಾರೆ. ಆದರೆ, ಕೇರಳ ಹ್ಯೂಮನ್ ರೈಟ್ಸ್ ಅಸೋಸಿಯೇಷನ್ ನ ಮುಖಂಡ ಫಹಾದ್ ಫಾಜಿಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಫಹಾದ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries