HEALTH TIPS

ಅತ್ತೆಯನ್ನು ಕತ್ತು ಹಿಸುಕಿ ಕೊಲೆಗೈದ ಸೊಸೆಗೆ ಜೀವಾವಧಿ ಶಿಕ್ಷೆ, 2ಲಕ್ಷ ರೂ. ದಂಡ

          ಕಾಸರಗೋಡು: ಅತ್ತೆಯ ಕತ್ತು ಹಿಸುಕಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ, ಆಕೆಯ ಸೊಸೆ ಬೇಡಡ್ಕ ಕೊಳತ್ತೂರು ಚೆಪ್ಪಿನಡ್ಕ ನಿವಾಸಿ ಕಮಲಾಕ್ಷನ್ ಎಂಬವರ ಪತ್ನಿ ಅಂಬಿಕಾ(49)ಎಂಬಾಕೆಗೆ ಜೀವಾವಧಿ ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿ ಕಾಸರಗೋಡು ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ(ಪ್ರಥಮ)ದ ನ್ಯಾಯಾಧೀಶ ಎ. ಮನೋಜ್  ತೀರ್ಪು ನೀಡಿದ್ದಾರೆ. 

            2014 ಸೆ. 16ರಂದು ಘಟನೆ ನಡೆದಿದೆ. ಅಂಬಿಕಾ ಅವರ ಪತಿ ಕಮಲಾಕ್ಷ ಅವರ ತಾಯಿ ಅಮ್ಮಾಳು ಅಮ್ಮ ಅವರನ್ನು ಅಂಬಿಕಾ ಕತ್ತು ಹಿಸುಕಿ ಕೊಲೆನಡೆಸಿರುವ ಬಗ್ಗೆ ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅಮ್ಮಾಳು ಅಮ್ಮ ಅವರ ಹೆಸರಲ್ಲಿದ್ದ ಜಾಗ ಮಾರಾಟ ನಡೆಸಿರುವುದು, ಆಹಾರ ನೀಡದೆ ಸತಾಯಿಸಿರುವುದು, ಟಿವಿ ವೀಕ್ಷಣೆಗೆ ಅಡ್ಡಿಪಡಿಸಿರುವುದು, ನೆರೆಮನೆಯವರಲ್ಲಿ ತನ್ನ ಬಗ್ಗೆ ಕೀಳಾಗಿ ಮಾತನಾಡುತ್ತಿರುವುದು ಸೇರಿದಂತೆ  ಮಾನಸಿಕ ಕಿರುಕುಳ ತಾಳಲಾಗದೆ ಕೊಲೆ ನಡೆಸಿರುವುದಾಗಿ ಅಂಬಿಕಾ ಪೊಲೀಸರಲ್ಲಿ ತಿಳಿಸಿದ್ದಳು. ಆದೂರು ಪೊಲೀಸ್ ಠಾಣೆಯ ಅಂದಿನ ಇನ್ಸ್‍ಪೆಕ್ಟರ್ ಹಾಗೂ ಪ್ರಸಕ್ತ ಕಣ್ಣೂರು ಕ್ರೈಂಬ್ರಾಂಚ್ ಡಿವೈಎಸ್‍ಪಿ ಆಗಿರುವ ಸತೀಶ್ ಕುಮಾರ್ ಆಲಕ್ಕಲ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries