ಜಮ್ಮು: ಮೂರು ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಒಳಗೊಂಡ 28ನೇ ತಂಡವು ಜಮ್ಮುವಿನಿಂದ ಅಮರನಾಥ ಗುಹಾ ದೇವಾಲಯದ ಕಡೆಗೆ ಇಂದು(ಗುರುವಾರ) ಮುಂಜಾನೆ ಪ್ರಯಾಣ ಬೆಳೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು: ಮೂರು ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಒಳಗೊಂಡ 28ನೇ ತಂಡವು ಜಮ್ಮುವಿನಿಂದ ಅಮರನಾಥ ಗುಹಾ ದೇವಾಲಯದ ಕಡೆಗೆ ಇಂದು(ಗುರುವಾರ) ಮುಂಜಾನೆ ಪ್ರಯಾಣ ಬೆಳೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈಸರ್ಗಿಕವಾಗಿ ರೂಪುಗೊಂಡಿರುವ ಶಿವನ ಲಿಂಗದ ದರ್ಶನವನ್ನು ಈಗಾಗಲೇ 4.25 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಡೆದಿದ್ದಾರೆ.
ಸಿಆರ್‌ಪಿಎಫ್ ಭದ್ರತಾ ಪಡೆಯ ಬೆಂಗಾವಲಿನಲ್ಲಿ 3,089 ಯಾತ್ರಾರ್ಥಿಗಳನ್ನೊಳಗೊಂಡ ತಂಡ 106 ವಾಹನಗಳಲ್ಲಿ ಭಗವತಿ ನಗರ ಬೇಸ್‌ಕ್ಯಾಂಪ್‌ನಿಂದ ಮುಂಜಾನೆ 3.23 ವೇಳೆಗೆ ಪ್ರಯಾಣ ಬೆಳೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜೂನ್ 29 ರಂದು ಆರಂಭವಾದ ಈ ಯಾತ್ರೆಯು, ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.