ಕಾಸರಗೋಡು: ಜಿಲ್ಲೆಯ ಮೂರು ವಾರ್ಡ್‍ಗಳು ಸೇರಿದಂತೆ ರಾಜ್ಯದ 49 ಸ್ಥಳೀಯ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡುಗಳಿಗೆ ಜುಲೈ 30 ರಂದು ಉಪಚುನಾವಣೆ ನಡೆಯಲಿದೆ. ಜುಲೈ 4 ರಂದು ಅಧಿಸೂಚನೆ ಹೊರಡಿಸಲಾಗುವುದು. ಜುಲೈ 4ರಿಂದ 11ರವರೆಗೆ ನಾಮಪತ್ರ ಸಲ್ಲಿಸಬಹುದು. ಜುಲೈ 12 ರಂದು ಸೂಕ್ಷ್ಮಪರಿಶೀಲನೆ ನಡೆಸಲಾಗುವುದು. ನಾಮಪತ್ರ ಹಿಂಪಡೆಯಲು ಜುಲೈ 15 ಕೊನೆಯ ದಿನಾಂಕವಾಘಿರುತ್ತದೆ. ಜುಲೈ 31 ರಂದು ಬೆಳಗ್ಗೆ 10 ಗಂಟೆಗೆ ಮತ ಎಣಿಕೆ ನಡೆಯಲಿದೆ.