ತಿರುವನಂತಪುರಂ: ನಟ ಮೋಹನ್ ಲಾಲ್ ಅವರಿಗೆ ಶ್ರೀಕುಮಾರನ್ ತಂಬಿ ಫೌಂಡೇಶನ್ ನೀಡುವ ಶ್ರೀಕುಮಾರನ್ ತಂಬಿ ಪ್ರಶಸ್ತಿ ಘೋಷಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆಗಸ್ಟ್ 31 ರಂದು ತಿರುವನಂತಪುರದ ನಿಶಾಗಂಧಿಯಲ್ಲಿ ಮೋಹನ್ ಲಾಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂ.ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ.
ಪ್ರಭಾವರ್ಮ, ಕೆ. ಜಯಕುಮಾರ್ ಐಎಎಸ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಅವರನ್ನೊಳಗೊಂಡ ತೀರ್ಪುಗಾರರ ತಂಡ ಮೋಹನ್ ಲಾಲ್ ಅವರನ್ನು ಆಯ್ಕೆ ಮಾಡಿದೆ. ಕಳೆದ ಬಾರಿ ಸಂಗೀತ ನಿರ್ದೇಶಕ ಎಂ. ಜಯಚಂದ್ರ ಅವರಿಗೆ ಪ್ರಶಸ್ತಿ ನೀಡಲಾಗಿತ್ತು.