HEALTH TIPS

ಬಾಂಗ್ಲಾದಲ್ಲಿ ಹಿಂಸಾಚಾರ: ಭಾರತಕ್ಕೆ ಆಶ್ರಯ ಅರಸಿ ಬಂದ 360ಕ್ಕೂ ಹೆಚ್ಚು ನಾಗರಿಕರು

           ಶಿಲ್ಲಾಂಗ್: ಭಾರತ, ನೇಪಾಳ ಮತ್ತು ಭೂತಾನ್‌ನ 360ಕ್ಕೂ ಹೆಚ್ಚು ನಾಗರಿಕರು ಶುಕ್ರವಾರ ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ಮೇಘಾಲಯಕ್ಕೆ ಬಂದಿದ್ದಾರೆ. ಇದರೊಂದಿಗೆ ರಾಜ್ಯಕ್ಕೆ ಆಶ್ರಯ ಅರಸಿ ಬಂದವರ ಸಂಖ್ಯೆ 670ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

              ದ್ವಾಕಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ 363 ಮಂದಿ ಮೇಘಾಲಯ ತಲುಪಿದ್ದಾರೆ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

                ಆ ಪೈಕಿ 204 ಭಾರತೀಯರು, 158 ನೇಪಾಳಿಗಳು ಮತ್ತು ಒಬ್ಬರು ಭೂತಾನ್ ಮೂಲದವರು ಇದ್ದಾರೆ.

            ಇದುವರೆಗೆ ವಿದ್ಯಾರ್ಥಿಗಳು ಸೇರಿದಂತೆ ಮೇಘಾಲಯದ 80 ನಾಗರಿಕರು ರಾಜ್ಯಕ್ಕೆ ಹಿಂತಿರುಗಿದ್ದಾರೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕಾರಣದಿಂದ ರಾಜ್ಯಕ್ಕೆ ಹಿಂತಿರುಗುವ ನಾಗರಿಕರ ಸಹಾಯಕ್ಕಾಗಿ ಮೇಘಾಲಯ ಸರ್ಕಾರವು 1800-345-3644 ಸಹಾಯವಾಣಿಯನ್ನು ಆರಂಭಿಸಿದೆ.

                 ಬಾಂಗ್ಲಾದೇಶದಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದ್ದು, ಕೆಲವೆಡೆ ಇಂಟರ್‌ನೆಟ್‌ ಹಾಗೂ ಮೊಬೈಲ್‌ ಸೇವೆ ಕಡಿತಗೊಳಿಸಲಾಗಿದೆ. ಪ್ರತಿಭಟನಕಾರರ ಮೇಲೆ ಪೊಲೀಸರು, ಭದ್ರತಾ ಪಡೆಗಳು ಗುಂಡಿನ ದಾಳಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಕಳೆದೊಂದು ವಾರದಲ್ಲಿ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries