ನೈರೋಬಿ: ಹೊಸ ತೆರಿಗೆ ಹೆಚ್ಚಳದ ವಿರುದ್ಧ ಕೀನ್ಯಾದಲ್ಲಿ ಜೂನ್ 18ರಿಂದ ಜುಲೈ 1ರವರೆಗೆ ನಡೆದ ಭಾರಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕನಿಷ್ಠ 39 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅಲ ಜಝೀರಾ ವರದಿ ಮಾಡಿದೆ.
ನೈರೋಬಿ: ಹೊಸ ತೆರಿಗೆ ಹೆಚ್ಚಳದ ವಿರುದ್ಧ ಕೀನ್ಯಾದಲ್ಲಿ ಜೂನ್ 18ರಿಂದ ಜುಲೈ 1ರವರೆಗೆ ನಡೆದ ಭಾರಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕನಿಷ್ಠ 39 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅಲ ಜಝೀರಾ ವರದಿ ಮಾಡಿದೆ.
ಈ ನಡುವೆ ಈ ವಾರ ಎರಡನೇ ಸುತ್ತಿನ ಪ್ರತಿಭಟನೆಯನ್ನು ಹೋರಾಟಗಾರರು ಹಮ್ಮಿಕೊಂಡಿದ್ದಾರೆ. ಇಲ್ಲಿನ ಸರ್ಕಾರ ತೆರಿಗ ನಿರ್ಧಾರವನ್ನು ಹಿಂಪಡೆಯಲಾಗಿದೆ.
ಕೆಲವರನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದು ಈಗ ಅವರು ನಾಪತ್ತೆಯಾಗಿರುವ 32 ಪ್ರಕರಣಗಳು ಸಹ ಕಂಡುಬಂದಿವೆ ಎಂದೂ ಅದು ಹೇಳಿದೆ. 627 ಮಂದಿಯನ್ನು ಬಂಧಿಸಲಾಗಿದೆ.
ಇದಲ್ಲದೆ, ಬಹುತೇಕ ಯುವ ಪ್ರತಿಭಟನಾಕಾರರ ನೇತೃತ್ವದಲ್ಲಿ ನಡೆಯುತ್ತಿದ್ದ ಶಾಂತಿಯುತ ತೆರಿಗೆ ವಿರೋಧಿ ರ್‍ಯಾಲಿಗಳು ಕಳೆದ ಮಂಗಳವಾರ ವಿವಾದಾತ್ಮಕ ಕಾಯ್ದೆ ಅಂಗೀಕರಿಸಿದ ಬೆನ್ನಲ್ಲೇ ಹಿಂಸಾರೂಪಕ್ಕೆ ತಿರುಗಿತ್ತು.
ಕೇಂದ್ರ ನೈರೋಬಿಯ ಸಂಸತ್ ಭವನದ ಆವರಣಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಸಂಸತ್ತಿನ ಒಂದು ಭಾಗಕ್ಕೆ ಬೆಂಕಿ ಹಚ್ಚಿದ್ದರು. ಈ ಸಂದರ್ಭ ಗುಂಪು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದರು.