ನವದೆಹಲಿ: ಕೇರಳದಿಂದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾದ 3 ಸದಸ್ಯರ ಪ್ರಮಾಣ ವಚನ ಸ್ವೀಕಾರ ಪೂರ್ಣಗೊಂಡಿದೆ.
ನಿನ್ನೆ ಬೆಳಗ್ಗೆ 11 ಗಂಟೆಗೆ ಹಾರಿಸ್ ಬಿರಾನ್, ಪಿಪಿ ಸುನೀರ್ ಮತ್ತು ಜೋಸ್ ಕೆ ಮಣಿ ಪ್ರಮಾಣ ವಚನ ಸ್ವೀಕರಿಸಿದರು. ಜೋಸ್ ಕೆ ಮಣಿ ಹೊರತುಪಡಿಸಿ, ಇಬ್ಬರೂ ರಾಜ್ಯಸಭೆಯಲ್ಲಿ ಹೊಸ ಮುಖಗಳು.
ಸುಪ್ರೀಂ ಕೋರ್ಟ್‍ನ ಪ್ರಮುಖ ವಕೀಲರೂ ಆಗಿರುವ ಹಾರಿಸ್ ಬಿರಾನ್ ಅವರು ಮುಸ್ಲಿಂ ಲೀಗ್‍ನ ರಾಜ್ಯಸಭಾ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಪಿ.ಪಿ.ಸುನೀರ್ ಸಿಪಿಐ ಪ್ರತಿನಿಧಿ. ಜೋಸ್ ಕೆ.ಮಣಿ ಅವರು ರಾಜ್ಯಸಭಾ ಸದಸ್ಯರಾಗುತ್ತಿರುವುದು ಇದು ಎರಡನೇ ಬಾರಿ. ಬಿನೋಯ್ ವಿಶ್ವಂ, ಎಳಮರಮ್ ಕರೀಂ ಮತ್ತು ಅಬ್ದುಲ್ ವಹಾಬ್ ಅವರ ಅವಧಿ ಜುಲೈ 1 ರಂದು ಪೂರ್ಣಗೊಂಡಿತ್ತು.