ಕಾಸರಗೋಡು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ 60ದಿವಸಗಳ ಅಖಂಡ ಭಜನಾ ಸಂಕೀರ್ತನೆ ನಡೆಯಲಿದೆ. ಜು. 21ರಂದು ಬೆಳಗ್ಗೆ 9ಕ್ಕೆ ಅಖಂಡ ಭಜನಾಸಂಕೀರ್ತನೆಗೆ ಚಿನ್ಮಯ ಮಿಶನ್ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಚಾಲನೆ ನೀಡುವರು.
ಪ್ರತಿ ದಿನ ವಿವಿಧ ತಂಡಗಳಿಂದ ಭಜನಾಸಂಕೀರ್ತನೆ ನಡೆಯುವುದು.
ಭಾಗವತ-ಯಕ್ಷಗಾನ ತಾಳಮದ್ದಳೆ ನವಾಹ:
ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸೇವಾ ರೂಪದಲ್ಲಿ ಶ್ರೀಮದ್ ದೇವೀ ಭಾಗವತ ನವಾಹ ಹಾಗೂ ಯಕ್ಷಗಾನ ತಾಳಮದ್ದಳೆ ನವಾಹ ಕಾರ್ಯಕ್ರಮ ಆ. 3ರಿಂದ 11ರ ವರೆಗೆ ಜರುಗಲಿದೆ.