HEALTH TIPS

ವಿಶ್ವವಿದ್ಯಾಲಯಗಳಲ್ಲಿ 4 ವರ್ಷದ ಪದವಿ ಕೋರ್ಸ್‌ಗಳಿಗೆ CM ಪಿಣರಾಯಿ ಚಾಲನೆ

           ತಿರುವನಂತಪುರ: ಕೇರಳದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಆರಂಭಿಸಲಾಗುತ್ತಿರುವ ನಾಲ್ಕು ವರ್ಷದ ಪದವಿ ಕೋರ್ಸ್‌ಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅಧಿಕೃತವಾಗಿ ಇಂದು ಚಾಲನೆ ನೀಡಿದರು.

            ಶಿಕ್ಷಣದಲ್ಲಿನ ಈ ಬದಲಾವಣೆಯು ಉನ್ನತ ಶಿಕ್ಷಣದಲ್ಲಿ ಬಹುದೊಡ್ಡ ಬದಲಾವಣೆ ತರಲಿದೆ ಮತ್ತು ಜಗತ್ತಿನಾದ್ಯಂತ ಹಲವು ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದು ಸಿಎಂ ಹೇಳಿದರು.

ವಿದ್ಯಾರ್ಥಿಗಳು ನಾಲ್ಕು ವರ್ಷದ ಪದವಿ ಶಿಕ್ಷಣವನ್ನು ಪಡೆಯಲಿದ್ದಾರೆ. ಇದರಲ್ಲಿ ಆನ್‌ಲೈನ್‌ ವೇದಿಕೆಯಲ್ಲಿ ಕಲಿಕೆ, ಪ್ರಾಯೋಗಿಕ ಕಲಿಕೆ ಮತ್ತು ಸ್ಥಳಗಳ ಭೇಟಿಗೆ ಸಮನಾದ ಪ್ರಾಮುಖ್ಯತೆ ನೀಡಲಾಗುವುದು ಎಂದು ವಿವರಿಸಿದರು.

            ಒಂದು ಕಾಲದಲ್ಲಿ ಕೇವಲ ಕಾಲೇಜು ಕ್ಯಾಂಪಸ್‌ಗಳಲ್ಲಿ ಮಾತ್ರ ಕಲಿಕೆ ಸೀಮಿತವಾಗಿತ್ತು. ಅದು ಬದಲಾಗುತ್ತಿದೆ ಎಂದ ಅವರು, ಉನ್ನತ ಶಿಕ್ಷಣದಲ್ಲಿ, ಉದ್ಯೋಗಕ್ಕೆ ಅಗತ್ಯವಾದ ತರಬೇತಿ, ಜ್ಞಾನ ವೃದ್ಧಿ ಮತ್ತು ಕೌಶಲಾಭಿವೃದ್ಧಿಗೆ ಹೆಚ್ಚಿನ ಒತ್ತು ದೊರೆಯಲಿದೆ ಎಂದರು.

                  ತಿರುವನಂತಪುರದಲ್ಲಿರುವ ಸರ್ಕಾರಿ ಮಹಿಳಾ ಕಾಲೇಜೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಲ್ಕು ವರ್ಷಗಳ ಪದವಿ ಕೋರ್ಸ್‌ಗಳಿಗೆ ಮುಖ್ಯಮಂತ್ರಿ ವಿಜಯನ್‌ ಚಾಲನೆ ನೀಡಿದರು.

             ನಮ್ಮ ಜ್ಞಾನ ಮತ್ತು ಉದ್ಯೋಗ ಕ್ಷೇತ್ರಗಳು ಹೆಚ್ಚಿನ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿರುವ ಸಮಯ ಇದು. ಹೀಗಾಗಿ ಉನ್ನತ ಶಿಕ್ಷಣದಲ್ಲಿ ಉದ್ಯೋಗ, ಕೌಶಲಗಳಿಗೆ ಅಗತ್ಯವಾದ ತರಬೇತಿ ಪಡೆಯಬಹುದು ಎಂದರು.

               ಇದೇ ವೇಳೆ, ಪಠ್ಯಕ್ರಮ ಪರಿಷ್ಕರಣೆ ಮತ್ತು ಕೋರ್ಸ್‌ಗಳಲ್ಲಿ ತಂದ ಸುಧಾರಣೆಗಳ ಜತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಇದೇ ಸಮನಾದ ಮಹತ್ವವನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries