ಕಣ್ಣೂರು: ಶಾಲೆಯ ಕಚೇರಿ ಕೊಠಡಿಗೆ ನುಗ್ಗಿದ ಕಳ್ಳನೊಬ್ಬ 40 ಮೊಟ್ಟೆಗಳನ್ನು ಕದ್ದೊಯ್ದಿದ್ದಾನೆ. ಕಣ್ಣೂರಿನ ಕಣ್ಣಪುರಂನಲ್ಲಿ ಈ ಘಟನೆ ನಡೆದಿದೆ.
ಚೆರುಕುನ್ನು ಪಳ್ಳಿಕ್ಕರ ಐಡೈಡ್.ಎಲ್.ಪಿ. ಶಾಲೆಯಲ್ಲಿ ಕಳ್ಳತನ ನಡೆದಿದೆ. ಕದ್ದ ಮೊಟ್ಟೆಗಳನ್ನು ಮಕ್ಕಳಿಗೆ ವಿತರಿಸಲು ಬೇಯಿಸಿ ಇರಿಸಲಾಗಿತ್ತು.
ಮೊಟ್ಟೆ ಜತೆಗೆ ಡೈರಿಯಲ್ಲಿಟ್ಟಿದ್ದ 1800 ರೂ.ಗಳನ್ನು ಕಳ್ಳ ಕದ್ದೊಯ್ದಿದ್ದಾನೆ. ಒಟ್ಟು 2,500 ರೂ.ನಷ್ಟು ನಷ್ಟವಾಗಿದೆ ಎಂದು ಶಾಲಾ ಅಧಿಕಾರಿಗಳು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಜುಲೈ 15ರಿಂದ 18ರ ರಾತ್ರಿ 7.15 ರ ನಡುವೆ ಕುಕೃತ್ಯ ನಡೆದಿದೆ ಎಂದು ಪ್ರಾಂಶುಪಾಲರಾದ ಪಿ.ಜೆ.ರೇಖಾ ಜೇಸಿ ಹೇಳುತ್ತಾರೆ. ಕಣ್ಣಪುರಂ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.