ಕೋಯಿಕ್ಕೋಡ್: ದೋಣಿಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ತೊಂದರೆಯಿಂದ ಸಮುದ್ರದ ನಡುವೆ ಸಿಲುಕಿಕೊಂಡಿದ್ದ 43 ಮಂದಿ ಮೀನುಗಾರರನ್ನು ಸೋಮವಾರ ಸಮುದ್ರ ಮೀನುಗಾರಿಕೆ ಇಲಾಖೆಯು ರಕ್ಷಿಸಿದೆ.
ಕೋಯಿಕ್ಕೋಡ್: ದೋಣಿಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ತೊಂದರೆಯಿಂದ ಸಮುದ್ರದ ನಡುವೆ ಸಿಲುಕಿಕೊಂಡಿದ್ದ 43 ಮಂದಿ ಮೀನುಗಾರರನ್ನು ಸೋಮವಾರ ಸಮುದ್ರ ಮೀನುಗಾರಿಕೆ ಇಲಾಖೆಯು ರಕ್ಷಿಸಿದೆ.
ಕೋಯಿಕ್ಕೋಡ್‌ನ ಕೋಯಿಲಾಂಡಿ ಹಾಗೂ ಬೇಪೋರ್ ಬಂದರುಗಳಿಂದ ಮೀನುಗಾರಿಕೆಗೆಂದು ತೆರಳಿದ್ದ ಎರಡು ದೋಣಿಗಳ ಇಂಜಿನ್ ನಿಷ್ಕ್ರಿಯಗೊಂಡಿದ್ದರಿಂದ, ಅವು ಸಮುದ್ರದ ನಡುವೆ ಸಿಲುಕಿಕೊಂಡಿದ್ದವು.
ಸುದ್ದಿ ತಿಳಿಯುತ್ತಿದ್ದಂತೆಯೇ ಬೇಪೋರ್ ಮೀನುಗಾರಿಕೆ ಸಹಾಯಕ ನಿರ್ದೇಶಕರು ನೀಡಿದ ಸೂಚನೆಯನ್ವಯ ಸಮುದ್ರ ಮೀನುಗಾರಿಕೆ ಜಾರಿ ಇಲಾಖೆಯು ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಿತು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೀನುಗಾರರನ್ನು ಸಮುದ್ರದ ನಡುವಿನಿಂದ ರಕ್ಷಿಸಿದ ನಂತರ, ಅವರನ್ನು ಸುರಕ್ಷಿತವಾಗಿ ಅವರವರ ಬಂದರುಗಳಿಗೆ ಕರೆ ತರಲಾಯಿತು ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.