ಇಡುಕ್ಕಿ: ಕಾಡಾನೆ ಹಿಂಡಿನ ದಾಳಿಯಲ್ಲಿ ಯುವಕನೊಬ್ಬ ದಾರುಣ ಅಂತ್ಯ ಕಂಡಿರುವ ಘಟನೆ ಚಿನ್ನಕನಾಲ್ ನಲ್ಲಿ ನಡೆದಿದೆ. ಚಿನ್ನಕನಾಲ್ ಟ್ಯಾಂಕ್ ಕುಟಿಯ ನಿವಾಸಿ ಕಣ್ಣನ್ ಮೃತರು. ಭಾನುವಾರ ಸಂಜೆ 5:30ರ ಸುಮಾರಿಗೆ ಘಟನೆ ನಡೆದಿದೆ.
ಚಿನ್ನಕನಾಲ್ ಮೂಲಕ ವನ್ನತಿಪಾರ ಎಂಬಲ್ಲಿನ ಜಮೀನಿಗೆ ಇಳಿದಿದ್ದ ಕಾಡಾನೆಗಳ ಹಿಂಡನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಕಣ್ಣನ್ ಆನೆಗಳ ಹಿಂಡಿನ ಮಧ್ಯೆ ಸಿಕ್ಕಿಬಿದ್ದಿದ್ದಾನೆ. ಒಂಬತ್ತು ಮರಿಯಾನೆÀಗಳನ್ನು ಒಳಗೊಂಡ ಕಾಡಾನೆಗಳ ಹಿಂಡು ಕಣ್ಣನ್ ಮೇಲೆ ದಾಳಿ ಮಾಡಿ ಜೀವಹಾನಿಗೆ ಕಾರಣವಾಯಿತು.