HEALTH TIPS

ಜುಲೈ ತಿಂಗಳೊಂದರಲ್ಲೇ ಗುರುವಾಯೂರು ದೇವಸ್ಥಾನದ ಖಜಾನೆಯಲ್ಲಿ 4.72 ಕೋಟಿ ರೂ. ಆದಾಯ: 2.15 ಕೆಜಿ ಚಿನ್ನ ಮತ್ತು 10.34 ಕೆಜಿ ಬೆಳ್ಳಿ

             ತ್ರಿಶೂರ್: ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ಜುಲೈ 2024 ರ ನಿಧಿ ಎಣಿಕೆ ಪೂರ್ಣಗೊಂಡಾಗ 4,72,69,284 ಕೋಟಿ ರೂ. ಆದಾಯ ದಾಖಲಾಗಿದೆ. 

               ಅಲ್ಲದೆ 2 ಕೆಜಿ 134 ಗ್ರಾಂ ಚಿನ್ನ ಮತ್ತು 10 ಕೆಜಿ 340 ಗ್ರಾಂ ಬೆಳ್ಳಿಯನ್ನು ಕಾಣಿಕೆಯಾಗಿ ಸ್ವೀಕರಿಸಲಾಗಿದೆ. ಹಿಂಪಡೆದ 2000 ರೂ.ಗಳ 15, 1000 ರೂ.ಗಳ 5 ಮತ್ತು 500 ರೂ.ಗಳ 48 ಕರೆನ್ಸಿ ನೋಟು ಲಭ್ಯವಾಗಿದೆ. ಇಂಡಿಯನ್ ಬ್ಯಾಂಕ್ ಗುರುವಾಯೂರ್ ಶಾಖೆ ಎಣಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.

             ಎಸ್‍ಬಿಐ ಮೂಲಕ ಇ-ಹುಂಡಿಯಲ್ಲಿ  3.21 ಲಕ್ಷ ಮತ್ತು ಎಸ್‍ಬಿಐ ಇನ್ನೊಂದು  ಇ-ಖಾತೆಯಲ್ಲಿ 3,21,612.ರೂ. ಸಂಗ್ರಹವಾಗಿ ಪಡೆಯಲಾಗಿದೆ. ಇದು ನಿಶ್ಚಿತ ಠೇವಣಿ ಆದಾಯಕ್ಕೆ ಹೆಚ್ಚುವರಿಯಾಗಿದೆ. ಯುಬಿಐ ಮೂಲಕ ಇ ಭಂಡಾರ ಆದಾಯ 28600 ರೂ.ಲಭ್ಯವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries