ಆಯುಸ್ಸು ಹೆಚ್ಚಾಗಬೇಕು ಎಂಬ ಆಸೆ ಯಾರಿಗೆ ತಾನೆ ಇಲ್ಲ? ಮೊದಲೆಲ್ಲಾ ಸಾಯುವ ವಯಸ್ಸು ಅಂದರೆ ಅದು ನೂರು ದಾಟಿದ ಮೇಲೆ ಎಂದು ಹೇಳಲಾಗುತ್ತಿತ್ತು, ಆದರೆ ಈಗ ಆ ರೀತಿ ಹೇಳಲು ಸಾಧ್ಯವಾಗುತ್ತಿಲ್ಲ, ಮನುಷ್ಯ 50 ವರ್ಷ ದಾಟಿದ ಮೇಲೆ ಬದುಕಿದರೆ ಅದೃಷ್ಟವಂತ ಎಂಬಂತಾಗಿದೆ.
ಹೃದಯಾಘಾತ, ಕ್ಯಾನ್ಸರ್‌ನಂಥ ರೋಗಗಳು ತುಂಬಾ ಚಿಕ್ಕ ಪ್ರಾಯದಲ್ಲಿಯೇ ಮನುಷ್ಯನನ್ನು ಕಾಡುತ್ತಿದೆ. ಆದರೆ ಸೂಪರ್ ಮಾಡೆಲ್ ಗ್ರ್ಯಾನೀಸ್ ಭವಿಷ್ಯದ ಆಶಾಕಿರಣವಾಗಿ ಕಾಣುತ್ತಿದೆ, ಇದು ಮನುಷ್ಯನ ಆಯುಸ್ಸು ಶೇ. 25ರಷ್ಟು ಹೆಚ್ಚಿಸಲಿದೆ.ಲ್ಯಾಬ್ ಟೆಸ್ಟ್‌ನಲ್ಲಿ ಗೆದ್ದಿರುವ ಸೂಪರ್‌ಮಾಡೆಲ್ ಗ್ರ್ಯಾನಿ ಇದನ್ನು ಪ್ರಾಣಿಗಳ ಮೇಲೆ ಟೆಸ್ಟ್ ಮಾಡಿದಾಗ ಅವುಗಳು ಆಯುಸ್ಸು ಹೆಚ್ಚಾಗಿತ್ತು ಅಲ್ಲದೆ ಅವುಗಳು ಆರೋಗ್ಯದಿಂದ ಇದ್ದೆವು, ಅಲ್ಲದೆ ಅವುಗಳ ದೇಹದಲ್ಲಿ ಯಾವುದೇ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗಿರಲಿಲ್ಲ. ಮನುಷ್ಯನ ಮೇಲೆ ಈ ಔಷಧದ ಪ್ರಯೋಗ ನಡೆದಿದೆ ಇದನ್ನು ಈಗಾಗಲೇ ನ ಮನುಷ್ಯನ ಮೇಲೆ ಪ್ರಯೋಗ ಮಾಡಲಾಗಿದೆ, ಇದು ಮನುಷ್ಯನ ಮೇಲೆಯೂ ಪ್ರಾಣಿಗಳ ಮೇಲೆ ಬೀರಿದಂತೆ ವಯಸ್ಸು ತಡೆಗಟ್ಟುವ ಪ್ರಭಾವ ಬೀರಿದೆಯೇ ಎಂದು ಹೇಳಲು ಸಾಧ್ಯವಾಗಿಲ್ಲ.
ಇಲಿಯ ಮೇಲೆ ಮಾಡಿದ ಪ್ರಯೋಗದಲ್ಲಿ ಕಂಡು ಬಂದ ಅಂಶಗಳು
ಕೆಲವು ಕ್ಯಾನ್ಸರ್ ಹೊಂದಿರುವ ಇಲಿಗೆ ಈ ಔಷಧ ನೀಡಲಾಗಿ ಅದರಲ್ಲಿ ಹಲವು ಬದಲಾವಣೆಗಳು ನಕಂಡು ಬಂತು, ಸೊರಗಿದ್ದ ಅದರ ದೇಹ ಮತ್ತೆ ದಷ್ಟಪುಷ್ಟವಾಯ್ತು, ಅಲ್ಲದೆ ಆ ಇಲಿಯ ಸ್ನಾಯುಗಳ ಬಲವಾಗಿದ್ದೆವು.
ಈ ಔಷಧವನ್ನು ಇಲಿಗೆ ನೀಡಿದಾಗ ಕಂಡು ಬಂದ ಪ್ರಭಾವಗಳು ವಯಸ್ಸಾದ ಮನುಷ್ಯರಿಗ ನೀಡಿದಾಗ ಕಂಡು ಬರಬಹುದು, ಅವರ ಆಯುಸ್ಸು ಹೆಚ್ಚಾಗಬಹುದು, ವಯೋಸಹಜ ಕಾಯಿಲೆಗಳು ದೂರಾಗುವುದು ಎಂದು ಹೇಳಲಾಗುವುದು.
ವಿಜ್ಞಾನಿಗಳು 75 ವಾರದ ಇಲಿಯನ್ನೂ ಪ್ರಯೋಗ ಮಾಡಲಾಯ್ತು, ಈ ಇಲಿಗೆ ನೀಡಿದ ಔಷಧವನ್ನು 55 ವರ್ಷ ಮನುಷ್ಯರಿಗೆ ನೀಡಬಹುದಾಗಿದೆ. ಇಲಿಗೆ ಈ ಔಷಧ ನೀಡಿದಾಗ ಅದರ ಸಾಮಾನ್ಯ ಜೀವಿತಾವಧಿಗಿಂತ ಹೆಚ್ಚು ಕಾಲ ಬದುಕಿತ್ತು.
ಇದೇ ಪ್ರಭಾವ ಮನುಷ್ಯನ ಮೇಲೆ ಪ್ರಭಾವ ಬೀರುವುದೇ?
ಇದೇ ರೀತಿ ಮನುಷ್ಯನ ಆಯುಸ್ಸು ಕೂಡ ಹೆಚ್ಚಾಗುವುದೇ ಎಂಬ ಕುತೂಹಲ ಮೂಡುವುದು ಸಹಜ, ಆದರೆ ಇದು ಟ್ರಯಲ್ ಹಂತದಲ್ಲಿ ಇದೆ. ಈಗ ಔಷಧ ನೀಡಿರುವ ಔಷದಗಳು ಎಷ್ಟು ವರ್ಷ ಬದುಕಿರುತ್ತಾರೆ ಎಂದು ಪರಿಶೀಲಿಸಿ ನಂತರವಷ್ಟೇ ಹೇಳಲಾಗುವುದು, ಇದಿಗ ಟ್ರಯಲ್ ಹಂತದಲ್ಲಿ.
ಈ ಔಷಧ ಯಶಸ್ವಿಯಾದರೆ ಇದನ್ನು ಪ್ರತಿಯೊಬ್ಬರು ಪಡೆದುಕೊಳ್ಳಲು ಬಯಸಬಹುದು, ಆಯುಸ್ಸು ಹೆಚ್ಚಾಗುವುದು ಯಾರಿಗೆ ತಾನೆ ಇಷ್ಟವಿಲ್ಲ?