ಕೇಂದ್ರಪಾರ: ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿದ 55 ವರ್ಷದ ವ್ಯಕ್ತಿಗೆ ಒಡಿಶಾದ ಕೇಂದ್ರಪಾರ ಜಿಲ್ಲೆಯ ನ್ಯಾಯಾಲಯವೊಂದು 20 ವರ್ಷ ಶಿಕ್ಷೆ ವಿಧಿಸಿದೆ.
ಪೋಕ್ಸೊ ನ್ಯಾಯಾಲಯವು ಈ ಶಿಕ್ಷೆ ವಿಧಿಸಿದ್ದು, ಜೊತೆಗೆ ₹50 ಸಾವಿರ ದಂಡವನ್ನೂ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ ಎರಡು ವರ್ಷಗಳ ಹೆಚ್ಚುವರಿ ಶಿಕ್ಷಯನ್ನು ಅನುಭವಿಸಬೇಕು ಎಂದು ಹೇಳಿದೆ.
2021ರಲ್ಲಿ ದಾಖಲಾದ ಪ್ರಕರಣ ಇದಾಗಿದ್ದು, ದನದ ಹಟ್ಟಿಯಲ್ಲಿ ತನ್ನ ಮಗನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತನ ತಾಯಿ ದೂರು ಸಲ್ಲಿಸಿದ್ದರು.
ಗುರುವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯವು, 14 ವರ್ಷದ ಸಂತ್ರಸ್ತ ಬಾಲಕನಿಗೆ ₹5 ಲಕ್ಷ ಪರಿಹಾರ ನೀಡಬೇಕು ಎಂದು ಒಡಿಶಾ ಕಾನೂನು ಸೇವಾ ಆಯೋಗಕ್ಕೆ ಸೂಚನೆ ನೀಡಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸಹಜ ಲೈಂಗಿಕ ಕ್ರಿಯೆ), ಸೆಕ್ಷನ್ 6 (ಲೈಂಗಿಕ ಆಕ್ರಮಣ) ಹಾಗೂ ಪೋಕ್ಸೊ ಕಾಯ್ದೆಯಡಿ ಶಿಕ್ಷೆ ವಿಧಿಸಿದೆ.