ಕಠ್ಮಂಡು: ನೇಪಾಳದ ತ್ರಿಶೂಲಿ ನದಿ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು ಏಳು ಭಾರತೀಯರು ಸೇರಿ 65 ಜನ ನಾಪತ್ತೆಯಾಗಿದ್ದಾರೆ.
ಕಠ್ಮಂಡು: ನೇಪಾಳದ ತ್ರಿಶೂಲಿ ನದಿ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು ಏಳು ಭಾರತೀಯರು ಸೇರಿ 65 ಜನ ನಾಪತ್ತೆಯಾಗಿದ್ದಾರೆ.
65 ಜನ ಪ್ರಯಾಣಿಕರಿದ್ದ ಎರಡು ಬಸ್ಸುಗಳು ನದಿಯಲ್ಲಿ ಕೊಚ್ಚಿ ಹೋಗಿವೆ ಎನ್ನಲಾಗುತ್ತಿದೆ.
ಇಬ್ಬರು ಚಾಲಕರು ಸೇರಿದಂತೆ ಬಸ್‌ಗಳಲ್ಲಿ ಇದ್ದ 65 ಜನ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ.
ಘಟನೆ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶೋಧ ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ ಎಂದು ಮದನ್ ನಗರದ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ.