ನವದೆಹಲಿ: ಲಡಾಕ್‌ನಲ್ಲಿ ಪರ್ವತಾರೋಹಣದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಸಂಭವಿಸಿದ ಹಿಮರಾಶಿ ಪ್ರವಾಹಕ್ಕೆ ಸಿಲುಕಿ ಹಿಮಸಮಾಧಿಯಾಗಿದ್ದ ಮೂವರು ಸೇನಾ ಸಿಬ್ಬಂದಿಯ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ನವದೆಹಲಿ: ಲಡಾಕ್‌ನಲ್ಲಿ ಪರ್ವತಾರೋಹಣದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಸಂಭವಿಸಿದ ಹಿಮರಾಶಿ ಪ್ರವಾಹಕ್ಕೆ ಸಿಲುಕಿ ಹಿಮಸಮಾಧಿಯಾಗಿದ್ದ ಮೂವರು ಸೇನಾ ಸಿಬ್ಬಂದಿಯ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಹಿಮಾಲಯದ 18,300 ಅಡಿ ಎತ್ತರದಲ್ಲಿ ಸಂಭವಿಸಿದ ಹಿಮರಾಶಿಯ ಪ್ರವಾಹದಲ್ಲಿ ಹವಾಲ್ದಾರ್ ರೋಹಿತ್ ಕುಮಾರ್, ಹವಾಲ್ದಾರ್ ಠಾಕೂರ್ ಬಹದ್ದೂರ್ ಅಲೆ ಹಾಗೂ ನಾಯಕ್ ಗೌತಮ್ ರಾಜವಂಶಿ ಅವರು ಸಿಲುಕಿದ್ದರು.
ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ಲ್ಯಾನ್ಸ್ ನಾಯಕ್ ಸ್ಟಾನ್‌ಝಿನ್ ಟಾರ್ಗೈಸ್ ಅವರು ಹುತಾತ್ಮರಾಗಿದ್ದರು. ಆದರೆ ಆ ತಕ್ಷಣವೇ ಅವರ ಮೃತದೇಹವನ್ನು ಪತ್ತೆ ಮಾಡಲಾಯಿತು. ಆದರೆ ಇತರ ಮೂವರು ಹುತಾತ್ಮರ ಮೃತದೇಹ ಈಗ ಲಭ್ಯವಾಗಿದೆ. ಇದಕ್ಕಾಗಿ ಸೇನಾ ಸಿಬ್ಬಂದಿ ಸಾಕಷ್ಟು ಸವಾಲುಗಳ ನಡುವೆಯೂ ಅವಿರತ ಶ್ರಮದಿಂದ ಪತ್ತೆ ಮಾಡಿದ್ದಾರೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
'ಗುಲ್ಮಾರ್ಗ್ ಮೂಲದ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್‌ನ 38 ಜನರ ತಂಡವು 2023ರಲ್ಲಿ ಮೌಂಟ್ ಕುನ್ ಏರಲು ಆರಂಭಿಸಿದರು. ಇವರು ಪರ್ವತ ಏರಲು ಆರಂಭಿಸಿದ್ದು ಅ. 1ರಂದು. ಪರ್ವತದ ತುದಿಯನ್ನು ಅ. 13ರಂದು ಇವರು ತಲುಪಬೇಕಿತ್ತು. ಆದರೆ ಅ. 8ರಂದು ಸಂಭವಿಸಿದ ಹಿಮರಾಶಿ ಪ್ರವಾಹದಲ್ಲಿ ನಾಲ್ವರು ಸೇನಾ ಸಿಬ್ಬಂದಿ ಸಿಲುಕಿ ಹುತಾತ್ಮರಾದರು' ಎಂದು ಮೂಲಗಳು ತಿಳಿಸಿವೆ.
'ಆಪರೇಷನ್ ಆರ್‌ಟಿಜಿ (ರೋಹಿತ್, ಠಾಕೂರ್, ಗೌತಮ್)ಯನ್ನು ಜೂನ್ 18ರಿಂದ ಆರಂಭಿಸಲಾಗಿತ್ತು. ಪ್ರತಿ ದಿನ 10ರಿಂದ 12 ಗಂಟೆಗಳ ಕಾಲ ಶೋಧ ಕಾರ್ಯವನ್ನು ನಡೆಸಲಾಗುತ್ತಿತ್ತು. ಅಂತಿಮವಾಗಿ ಜುಲೈ 7 ಹಾಗೂ 8ರಂದು ಸೈನಿಕರ ಮೃತದೇಹವು ಹತ್ತು ಅಡಿ ಆಳದಲ್ಲಿ ' ಪತ್ತೆಯಾಯಿತು ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.