ಅಪೌಷ್ಟಿಕತೆಯಿಂದ ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ತಾಯಂದಿರ ರೋದನಕ್ಕೆ ಪರಿಹಾರವಾಗಿ ಕಾರ್ತುಂಬಿ ಛತ್ರಿಗಳು ಹುಟ್ಟಿಕೊಂಡಿವೆ.
ಅಟ್ಟಪ್ಪಾಡಿಯ ಪ್ರತಿ ಮನೆಗೂ ಹಣ ತರುವ ಸಲುವಾಗಿ ಕಾರ್ತುಂಬಿ ಎಂಬ ಕೊಡೆ ತಯಾರಿಕಾ ಉದ್ಯಮವನ್ನು ಆರಂಭಿಸಲಾಗಿದೆ.
7 ಲಕ್ಷ ಸಾಲ ಪಡೆದು ಈ ಉದ್ಯಮ ಆರಂಭಿಸಲಾಗಿದೆ. ಎರಡು ವಷರ್Àದಲ್ಲಿ ಮಹಿಳೆಯರು ಕೊಡೆ ತಯಾರಿಸಿ ಸಂಪೂರ್ಣ ಸಾಲ ತೀರಿಸಲಾಗಿದೆ. ಈಗ ಹೆಚ್ಚಿನ ಸ್ಥಳಗಳಿಗೆ ಮಾರ್ಕೆಟಿಂಗ್ ನಡೆಸಲಾಗುತ್ತಿದೆ.
750 ಕುಟುಂಬಗಳು ಕಾರ್ತುಂಬಿ ಛತ್ರಿಯಿಂದ ಪ್ರಯೋಜನ ಪಡೆಯುತ್ತವೆ. ಪೌಷ್ಟಿಕಾಂಶ ಕೊರತೆಯಿಂದ ಶಿಶುಗಳು ಸಾಯುವ ಪರಿಸ್ಥಿತಿ ಈಗ ಇಲ್ಲಿ ಇಲ್ಲ. ಪ್ರತಿ ತಾಯಿಗೆ ತಿಂಗಳಿಗೆ 10,000 ರೂ.ವರಮಾನ ಲಭ್ಯವಾಗುತ್ತದೆ. ಅಟ್ಟಪಾಡಿಯಲ್ಲಿ ಹಲವು ಗ್ರಾಮಗಳಿವೆ. ಸರ್ಕಾರ ಕೆಲವು ಛತ್ರಿಗಳನ್ನು ಖರೀದಿಸುತ್ತದೆ. ಕೆಲವು ಖಾಸಗಿ ಸಂಸ್ಥೆಗಳೂ ಛತ್ರಿಗಳನ್ನು ಖರೀದಿಸುತ್ತವೆ. ಬೆಲೆ 350 ರೂ. ಛತ್ರಿಗಳನ್ನು ವಿವಿಧ ಬಣ್ಣಗಳು ಮತ್ತು ಗಾತ್ರಗಳಲ್ಲಿ ತಯಾರಿಸಲಾಗುತ್ತದೆ.
ಮನ್ನಾಕ್ರ್ಕಾಡ್ ಗೆ ತಲುಪಿಸಿದ ಬಳಿಕ ಈ ಕೊಡೆಗಳನ್ನು ಹೊರಗೆ ಕೊರಿಯರ್ ಮಾಡಲು ಅಲ್ಪ ಸಮಸ್ಯೆ ಈಗಿನದು. ಸಮಸ್ಯೆ ಪರಿಹಾರಕ್ಕೆ ಈಗ ಪ್ರಯತ್ನಗಳು ಸಾಗಿವೆ. ಸುಮಾರು 300 ಮಹಿಳೆಯರು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ವಠಲಕಿ ಸಹಕಾರಿ ಫಾರ್ಮಿಂಗ್ ಸೊಸೈಟಿ ಅಡಿಯಲ್ಲಿ ಛತ್ರಿಗಳನ್ನು ತಯಾರಿಸಲಾಗುತ್ತದೆ. ಪ್ರಧಾನಿಯವರ ಶನಿವಾರದ ಮನ್ ಕಿ ಬಾತ್‍ನಲ್ಲಿ ಕಾರ್ತುಂಬಿ ಛತ್ರಿಗಳ ಪ್ರಸ್ತಾಪವಾದ ನಂತರ ಕಾರ್ತುಂಬಿ ಛತ್ರಿಗಳು ವಿಶ್ವದ ಗಮನ ಸೆಳೆದಿದೆ.