ನವದೆಹಲಿ: ಉತ್ತರಾಖಂಡ ಮತ್ತು ಉತ್ತರಪ್ರದೇಶದಲ್ಲಿ ಶನಿವಾರ ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಉತ್ತರಾಖಂಡದ ನ್ಯೂ ತೆಹ್ರಿಯಲ್ಲಿ ಭೂಕುಸಿತ ಉಂಟಾಗಿ ತಾಯಿ-ಮಗಳು ಮೃತಪಟ್ಟಿದ್ದರೆ, ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವಿಗೀಡಾಗಿದ್ದಾರೆ.
ನವಿಮುಂಬೈನಲ್ಲಿ ಕಟ್ಟಡವೊಂದು ಕುಸಿದಿದ್ದರಿಂದ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ದೆಹಲಿ ಸೇರಿದಂತೆ ವಾಯವ್ಯ ಮತ್ತು ಉತ್ತರ ಭಾರತದ ಕೆಲವು ಭಾಗದಲ್ಲಿ ಮಳೆಯಾಗಿದೆ. ಸಂಜೆ ಸುರಿದ ವರ್ಷಧಾರೆಯಿಂದ ಸಂಚಾರ ದಟ್ಟಣೆ ಉಂಟಾಯಿತು. ಕೆಲವು ಪ್ರದೇಶಗಳು ಜಲಾವೃತಗೊಂಡವು.
ಛತ್ತೀಸಗಡ, ತಮಿಳುನಾಡು, ಮಧ್ಯಪ್ರದೇಶದ ಪಶ್ಚಿಮ ಹಾಗೂ ಮಧ್ಯ ಭಾಗ, ಮಹಾರಾಷ್ಟ್ರದ ಮಧ್ಯಭಾಗ, ವಿದರ್ಭ ಪ್ರಾಂತ್ಯ, ಕರಾವಳಿ ಹಾಗೂ ಉತ್ತರ ಕರ್ನಾಟಕ, ಒಡಿಶಾ, ಹರಿಯಾಣ-ಚಂಡೀಗಡ, ರಾಜಸ್ಥಾನದ ಪಶ್ಚಿಮ ಭಾಗ, ಕೇರಳ, ಗೋವಾದಲ್ಲಿ ಭಾರಿ ವರ್ಷಧಾರೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪಂಜಾಬ್‌ನ ಜಲಂಧರ್‌ನಲ್ಲಿ ಶನಿವಾರ ಸುರಿದ ಭಾರಿ ವರ್ಷಧಾರೆಗೆ ಜಲಾವೃತವಾಗಿದ್ದ ರಸ್ತೆಯಲ್ಲೇ ವಾಹನಗಳು ಸಂಚರಿಸಿದವು -ಪಿಟಿಐ ಚಿತ್ರಮಹಾರಾಷ್ಟ್ರದ ಖೋಡಶಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದರಿಂದ ಸತಾರಾ ಜಿಲ್ಲೆಯಲ್ಲಿ ಕೃಷ್ಣಾ ನದಿ ಉಕ್ಕೇರಿ ಹರಿದಿದೆ -ಪಿಟಿಐ ಚಿತ್ರಭಾರಿ ಮಳೆಯಿಂದಾಗಿ ಕೇದಾರನಾಥ ಯಾತ್ರೆಯ ರಸ್ತೆಯು ರುದ್ರಪ್ರಯಾಗ ಜಿಲ್ಲೆಯಲ್ಲಿ ಶನಿವಾರ ಕುಸಿದಿದೆ -ಪಿಟಿಐ ಚಿತ್ರ