HEALTH TIPS

ಕೇರಳದಲ್ಲಿ 80,000 ಶಿಕ್ಷಕರಿಗೆ ಎ.ಐ. ತರಬೇತಿ ಪ್ರಾರಂಭ: ಶಿಕ್ಷಣ ಸಚಿವ

                ತಿರುವನಂತಪುರ: ಕೇರಳದಲ್ಲಿ 80,000 ಶಿಕ್ಷಕರಿಗೆ ಎಐ ತರಬೇತಿಯನ್ನು ಆರಂಭಿಸಲಾಗಿದೆ ಎಂದು ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಹೇಳಿರುವರು.

                2025 ರ ವೇಳೆಗೆ, ಎಲ್ಲಾ ಶಿಕ್ಷಕರು ಎ.ಐ ತರಬೇತಿ ಪಡೆಯಲಿದ್ದಾರೆ ಎಂದು ತಿಳಿಸಿದರು. ಯುನಿಸೆಫ್ ಸಿದ್ಧಪಡಿಸಿರುವ ಲಿಟಲ್ ಕೈಟ್ಸ್ ಪ್ರಶಸ್ತಿ ವಿತರಣೆ ಹಾಗೂ ಅಧ್ಯಯನ ವರದಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

                   ಸಮಾರಂಭವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ಗುರುತಿಸಿ ಪ್ರಗತಿಪರವಾಗಿ ಬಳಸಿಕೊಳ್ಳಬೇಕು. ಭವಿಷ್ಯವು ಕೃತಕ ಬುದ್ಧಿಮತ್ತೆಯ ಯುಗವಾಗಿದೆ ಎಂದು ತಜ್ಞರು ಹೇಳುತ್ತಾರೆ. ಮುಂದಿನ ಪೀಳಿಗೆಗೆ ಆ ನಿಟ್ಟಿನಲ್ಲಿ ಬಲ ನೀಡಲು ಶಕ್ತಿ ತುಂಬಬೇಕಿದೆ. ಉತ್ತಮವಾದವುಗಳನ್ನು ಪರಿಚಯಿಸುವ ಮತ್ತು ಹಾನಿಕಾರಕವನ್ನು ತಿರಸ್ಕರಿಸುವ ದೃಷ್ಟಿಯಿಂದ ಶಾಲೆಗಳಲ್ಲಿ ಸುಧಾರಿತ ತಂತ್ರಜ್ಞಾನದ ಅಧ್ಯಯನ ಮತ್ತು ಅಳವಡಿಕೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕೃತಕ ಬುದ್ಧಿಮತ್ತೆ ಹೇಗೆ ಕೆಲಸ ಮಾಡುತ್ತದೆ ಎಂಬುದಷ್ಟೇ ಅಲ್ಲದೆ ಎಐಯ ಮೂಲ ಕೋಡಿಂಗ್ ಅನ್ನು ಕಲಿಯುತ್ತಾರೆ. ಅವರು ತಂತ್ರಜ್ಞಾನದ ವಿವಿಧ ಅಂಶಗಳನ್ನು ಸಹ ಅರ್ಥಮಾಡಿಕೊಳ್ಳುತ್ತಾರೆ. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಮಕ್ಕಳಿಗೆ ಕಲಿಕಾ ಸೌಲಭ್ಯ ಕಲ್ಪಿಸಿದರೆ ಸಾಲದು. ಅದನ್ನು ವಿವೇಚನೆಯಿಂದ ಬಳಸಿಕೊಳ್ಳುವ ಜ್ಞಾನವನ್ನು ನೀಡಬೇಕು. ಇದನ್ನು ಆಧರಿಸಿ ಪ್ರಾಥಮಿಕ ಹಂತದ ಮಾಹಿತಿ ತಂತ್ರಜ್ಞಾನ ಪಠ್ಯಪುಸ್ತಕಗಳಲ್ಲಿ ಪೆÇ್ರೀಗ್ರಾಮಿಂಗ್ ಆಪ್ಟಿಟ್ಯೂಡ್ ಮತ್ತು ತಾರ್ಕಿಕ ಚಿಂತನೆಯನ್ನು ಅಭಿವೃದ್ಧಿಪಡಿಸಲು ವಿಶೇಷ ಪರಿಗಣನೆಯನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

                ಯುನಿಸೆಫ್ ಇಂಡಿಯಾದ ಶೈಕ್ಷಣಿಕ ತಜ್ಞೆ ಪ್ರಮೀಳಾ ಮನೋಹರನ್, ಸಾಮಾನ್ಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ರಾಣಿ ಜಾರ್ಜ್, ಕೈಟ್ ಸಿಇಒ ಅನ್ವರ್ ಸಾದತ್, ಯುನಿಸೆಫ್ ಸಾಮಾಜಿಕ ನೀತಿ ತಜ್ಞ ಡಾ. ಅಖಿಲಾ ರಾಧಾಕೃಷ್ಣನ್ ಮತ್ತು ಐಟಿ ಫಾರ್ ಚೇಂಜ್ ನಿರ್ದೇಶಕ ಗುರುಮೂರ್ತಿ ಕಾಶಿನಾಥನ್ ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries