HEALTH TIPS

ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ್ದಕ್ಕೆ ಕಳೆದ ಐದು ವರ್ಷಗಳಲ್ಲಿ 8,500 ಕೋಟಿ ರೂ. ದಂಡ ಸುಲಿದ ಬ್ಯಾಂಕ್ ಗಳು

 ದೇಶದ ಅಗ್ರಗಣ್ಯ ಬ್ಯಾಂಕ್ ಆಗಿರುವ ಎಸ್‌ಬಿಐ ವಿತ್ತವರ್ಷ 2020ರ ಬಳಿಕ ಕನಿಷ್ಠ ಶಿಲ್ಕು ಕಾಯ್ದುಕೊಳ್ಳದ ಖಾತೆಗಳಿಗೆ ದಂಡ ವಿಧಿಸದಿರಲು ನಿರ್ಧರಿಸಿದ ಬಳಿಕವೂ ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್(ಪಿಎಸ್‌ಬಿ)ಗಳು ಇದಕ್ಕಾಗಿ ಸಂಗ್ರಹಿಸಿರುವ ದಂಡದ ಮೊತ್ತ ಶೇ.34ಕ್ಕೂ ಅಧಿಕ ಏರಿಕೆಯಾಗಿದೆ.

ಸಹಾಯಕ ವಿತ್ತಸಚಿವ ಪಂಕಜ ಚೌಧರಿಯವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಒದಗಿಸಿದ ಮಾಹಿತಿಯ ಪ್ರಕಾರ ವಿತ್ತವರ್ಷ 2020ರಿಂದ 2024ರ ನಡುವೆ ಪಿಎಸ್‌ಬಿಗಳು ಖಾತೆಗಳಲ್ಲಿ ಕನಿಷ್ಠ ಶಿಲ್ಕು ಕಾಯ್ದುಕೊಳ್ಳದ್ದಕ್ಕೆ ದಂಡರೂಪದಲ್ಲಿ ಸುಮಾರು 8,500 ಕೋಟಿ ರೂ.ಗಳನ್ನು ಸಂಗ್ರಹಿಸಿವೆ. 11 ಪಿಎಸ್‌ಬಿಗಳ ಪೈಕಿ ಪಿಎನ್‌ಬಿ, ಬಿಒಬಿ, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ಆಯಂಡ್ ಸಿಂಧ್ ಬ್ಯಾಂಕ್,‌ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುಕೋ ಬ್ಯಾಂಕುಗಳು ತ್ರೈಮಾಸಿಕ ಸರಾಸರಿ ಶಿಲ್ಕು (ಕ್ಯೂಎಬಿ) ಕಾಯ್ದುಕೊಳ್ಳದ್ದಕ್ಕೆ ದಂಡವನ್ನು ವಿಧಿಸುತ್ತಿವೆ. ಆದರೆ ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸರಾಸರಿ ಮಾಸಿಕ ಶಿಲ್ಕು (ಎಎಂಬಿ) ಕಾಯ್ದುಕೊಳ್ಳದ್ದಕ್ಕೆ ದಂಡವನ್ನು ವಿಧಿಸುತ್ತಿವೆ.

ವಿವಿಧ ಪಿಎಸ್‌ಬಿಗಳು ದಂಡವನ್ನು ಸಂಗ್ರಹಿಸಲು ವಿಭಿನ್ನ ಕಾರ್ಯವಿಧಾನಗಳನ್ನು ಹೊಂದಿವೆ. ಪಿಎನ್‌ಬಿಯ ವೆಬ್‌ಸೈಟ್ ಪ್ರಕಾರ ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರು ನಗರ ಮತ್ತು ಮಹಾನಗರ,ಅರೆನಗರ,ಗ್ರಾಮೀಣ ಪ್ರದೇಶಗಳಲ್ಲಿ ಅನುಕ್ರಮವಾಗಿ 2,000 ರೂ,1,000 ರೂ. ಮತ್ತು 500 ರೂ.ಗಳ ಕನಿಷ್ಠ ಕ್ಯೂಎಬಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಕನಿಷ್ಠ ಶಿಲ್ಕು ಉಳಿಸದಿದ್ದರೆ 100 ರೂ.ನಿಂದ 250 ರೂ.ವರೆಗೆ ದಂಡವನ್ನು ವಿಧಿಸಲಾಗುತ್ತದೆ. ಚಾಲ್ತಿ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಕನಿಷ್ಠ ಕ್ಯೂಎಬಿ ಗ್ರಾಮೀಣ, ಅರೆನಗರ, ನಗರ ಮತ್ತು ಮಹಾನಗರಗಳಿಗೆ ಅನುಕ್ರಮವಾಗಿ 1,000 ರೂ., 2,000 ರೂ., 5,000 ರೂ. ಮತ್ತು 10,000 ರೂ.ಗಳಾಗಿದ್ದರೆ ವಿಧಿಸಬಹುದಾದ ದಂಡದ ಮೊತ್ತ 400 ರೂ.ಗಳಿಂದ 600 ರೂ.ವರೆಗಿದೆ.

ಕೆನರಾ ಬ್ಯಾಂಕಿನ ವೆಬ್‌ಸೈಟ್‌ನಂತೆ ಉಳಿತಾಯ ಖಾತೆಗಳಿಗೆ ಎಎಂಬಿ ನಗರ ಮತ್ತು ಮಹಾನಗರ ಪ್ರದೇಶಗಳಿಗೆ 2,000 ರೂ., ಅರೆನಗರ ಪ್ರದೇಶಕ್ಕೆ 1,000 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ರೂ.ಆಗಿದೆ. ಕನಿಷ್ಠ ಶಿಲ್ಕಿಗೆ ಕೊರತೆಯನ್ನು ಅವಲಂಬಿಸಿ 25 ರೂ.ಗಳಿಂದ 45 ರೂ.ಗಳವರಗೆ ದಂಡ ಮತ್ತು ಜಿಎಸ್‌ಟಿಯನ್ನು ವಿಧಿಸಲಾಗುಇಉತ್ತದೆ. ಚಾಲ್ತಿಖಾತೆಗಳಿಗೆ ಎಂಎಂಬಿ ಗ್ರಾಮೀಣದಲ್ಲಿ 1,000 ರೂ.,ಅರೆನಗರ ಪ್ರದೇಶದಲ್ಲಿ 2,000 ರೂ.,ನಗರಗಳಲ್ಲಿ 5,000 ರೂ. ಮತ್ತು ಮಹಾನಗರಗಳಿಗೆ 7,500 ರೂ. ಆಗಿದೆ. ಶಿಲ್ಕಿನ ಕೊರತೆಯಾದರೆ ತಿಂಗಳಿಗೆ ಗರಿಷ್ಠ 500 ರೂ.ಮೀರದಂತೆ ದಿನವೊಂದಕ್ಕೆ 60 ರೂ.ಗಳ ದಂಡ ಮತ್ತು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ.

ಈ ನಡುವೆ,ಗ್ರಾಹಕರು ಖಾತೆ ತೆರೆಯುವಾಗ ಕನಿಷ್ಠ ಶಿಲ್ಕು ಅಗತ್ಯದ ಬಗ್ಗೆ ಬ್ಯಾಂಕುಗಳು ಅವರಿಗೆ ತಿಳಿಸಬೇಕು ಮತ್ತು ಯಾವುದೇ ಬದಲಾವಣೆಗಳಿದ್ದರೆ ಮಾಹಿತಿ ನೀಡಬೇಕು ಎಂದು ಹೇಳಿದ ಚೌಧರಿ,ಕನಿಷ್ಠ ಶಿಲ್ಕು ಕಾಯ್ದುಕೊಂಡಿರದ ಸಂದರ್ಭಗಳಲ್ಲಿ ಅದನ್ನು ಒಂದು ತಿಂಗಳೊಳಗೆ ಸರಿ ಪಡಿಸದಿದ್ದರೆ ಅನ್ವಯವಾಗುವ ದಂಡದ ಬಗ್ಗೆ ಬ್ಯಾಂಕುಗಳು ಗ್ರಾಹಕರಿಗೆ ತಿಳಿಸಬೇಕು. ಕೇವಲ ದಂಡದಿಂದಾಗಿಯೇ ಉಳಿತಾಯ ಖಾತೆಗಳು ನಕಾರಾತ್ಮಕ ಶಿಲ್ಕನ್ನು ಹೊಂದದಿರುವಂತೆ ಬ್ಯಾಂಕುಗಳು ನೋಡಿಕೊಳ್ಳಬೇಕು ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries