ಮಟ್ಟನ್ನೂರು: ಕಣ್ಣೂರು ವಿಮಾನ ನಿಲ್ದಾಣದಲ್ಲಿ ಮತ್ತೊಂದು ಅಕ್ರಮ ಚಿನ್ನ ಸಾಗಾಟ ಪತ್ತೆಹಚ್ಚಲಾಗಿದೆ. ಕಾಸರಗೋಡು ಮೂಲದ ಪೊವ್ವಲವೀಟಿಲ್ ಪ್ರತೀಶ್ ನಿಂದ 1223 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಇದರ ಬೆಲೆ 87,32,220 ರೂ.ಎಂದು ಗುರುತಿಸಲಾಗಿದೆ. ಚಿನ್ನದ ಮಿಶ್ರಣವನ್ನು ಪಾಸ್ ಪೋರ್ಟ್ ಆಕಾರದಲ್ಲಿ ಪಾಲಿಥಿನ್ ಕವರ್ ನಲ್ಲಿಟ್ಟು ಆತ ಧರಿಸಿದ್ದ ಪ್ಯಾಂಟ್ ನ ಜೇಬಿನಲ್ಲಿ ಬಚ್ಚಿಟ್ಟಿದ್ದ.
ಚಿನ್ನದ ಕಳ್ಳಸಾಗಣೆ ತಂಡಗಳು ಅಕ್ರಮ ಕಳ್ಳಸಾಗಣೆಗೆ ವಿನೂತನ ಮಾರ್ಗಗಳನ್ನು ಹುಡುಕುತ್ತಿವೆ. ಶನಿವಾರ ಶಾರ್ಜಾದಿಂದ ಬಂದ ಪ್ರಯಾಣಿಕನಿಂದ ಪಾಸ್ ಪೋರ್ಟ್ ರೂಪದಲ್ಲಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.
ಕಣ್ಣೂರು ವಿಮಾನ ನಿಲ್ದಾಣದಲ್ಲಿ ಚಾಕೊಲೇಟ್ ಕವರ್ ಮತ್ತು ಪ್ಯಾಂಟ್ ಮೇಲೆ ಬಣ್ಣ ಬಳಿದ ರೀತಿಯ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಸುಲಭವಾಗಿ ಸಿಕ್ಕಿಬೀಳುವುದನ್ನು ತಪ್ಪಿಸಲು ಚಿನ್ನ ಕಳ್ಳಸಾಗಣೆದಾರರು ಪ್ರತಿ ಬಾರಿ ಹೊಸ ವಿಧಾನಗಳನ್ನು ಪ್ರಯತ್ನಿಸುತ್ತಿದ್ದಾರೆ. ಕಸ್ಟಮ್ಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿವೆ.