HEALTH TIPS

ಕೊಕ್ಕೆಜಾಲು ವಾಫಿ ಕಾಲೇಜು ಕಟ್ಟಡ ಉದ್ಘಾಟನೆ ಹಾಗೂ ಸನದ್ ದಾನ ಘೋಷಣೆ ಜುಲೈ 8 ರಂದು

           ಕುಂಬಳೆ: ಮಮ್ಮುಂಜಿ ಹಾಜಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‍ನಡಿ ಬಂದ್ಯೋಡು ಸಮೀಪದ ಕೊಕ್ಕಜಾಲು ಉಮರಾಲಿ ಶಿಹಾಬ್ ತಂಙಳ್ ಇಸ್ಲಾಮಿಕ್ ಅಕಾಡೆಮಿಯ ವಾಫಿ ಕಾಲೇಜಿಗೆ ಹೊಸದಾಗಿ ನಿರ್ಮಿಸಿರುವ ಅಕಾಡೆಮಿಕ್ ಬ್ಲಾಕ್ ಉದ್ಘಾಟನೆ ಹಾಗೂ ಸನದ್ ದಾನ ಘೋಷಣೆ ಜುಲೈ 8 ರಂದು ಸೋಮವಾರ ಬೆಳಗ್ಗೆ 11 ಕ್ಕೆ ಪಾಣಕ್ಕಾಡ್ ಸಯ್ಯಿದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ನೆರವೇರಿಸಲಿದ್ದಾರೆ ಎಂದು ಸಂಬಂಧಪಟ್ಟವರು ಕುಂಬಳೆ ಪ್ರೆಸ್ ಪೋರಂನಲ್ಲಿ ಶುಕ್ರವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

            2012ರಲ್ಲಿ ಕಾರ್ಯಾರಂಭ ಮಾಡಿದ ವಾಫಿ ಕಾಲೇಜಿನ ಮೊದಲ ಸನದ್ ದಾನವು ಭವ್ಯವಾದ ಕಾರ್ಯಕ್ರಮದೊಂದಿಗೆ ಮುಂದಿನ ವರ್ಷ ನಡೆಯಲಿದೆ. ಏಳು ತಂಡಗಳಿಂದ ಅಧ್ಯಯನ ಪೂರ್ಣಗೊಳಿಸಿರುವ 130ಕ್ಕೂ ಹೆಚ್ಚು ಯುವ ಪಂಡಿತರಿಗೆ ಕಾರ್ಯಕ್ರಮದಲ್ಲಿ ಸನದ್ ವಿತರಿಸಲಾಗುವುದು.

           ಕಾಲೇಜಿನ ಅಧಿಕೃತ ವೆಬ್‍ಸೈಟ್ ಲೋಕಾರ್ಪಣೆ ಈ ಸಂದರ್ಭ ನಡೆಯಲಿದ್ದು,  ಅಬ್ಬಾಸ್ ಅಲಿ ಶಿಹಾಬ್ ತಂಙಳ್ ನೆರವೇರಿಸಲಿದ್ದಾರೆ. ಕಾಲೇಜು ಅಧ್ಯಕ್ಷ ಸಯ್ಯಿದ್ ಸೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಕುನ್ನಂಗೈ ಅಧ್ಯಕ್ಷತೆ ವಹಿಸುವರು. ಶಾಸಕ ಎ.ಕೆ.ಎಂ. ಅಶ್ರಫ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಖಾಲಿದ್ ಬಾಖವಿ, ಕೆ.ಎಂ ಅಬ್ದುಲ್ ರಹೀಮ್ ಕೊಕ್ಕೆಜಾಲು ಉಪಸ್ಥಿತರಿರುವರು. ಮತ, ರಾಜಕೀಯ, ಸಾಮಾಜಿಕ ಕ್ಷೇತ್ರದ ಪ್ರಮುಖರು ಭಾಗವಹಿಸುತ್ತಾರೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

            ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಎಂ.ಎಸ್ ಖಾಲಿದ್ ಬಾಖವಿ, ಆಡಳಿತ ಟ್ರಸ್ಟಿ ಸದಸ್ಯರಾದ ಅಹಮದ್ ಕುಂಞÂ್ಞ ಹಾಜಿ, ಹೈದರ್ ವಳಪ್, ಅಧ್ಯಾಪಕ ಉನೈಸ್ ಅವರು ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries