HEALTH TIPS

ಬಿಜನೋರ್‌ನಲ್ಲಿ ಚಿರತೆ ದಾಳಿ: 8 ವರ್ಷದ ಬಾಲಕಿ ಸಾವು

          ಬಿಜನೋರ್‌: ಚಿರತೆ ದಾಳಿಯಿಂದ 8 ವರ್ಷದ ಬಾಲಕಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಿಜನೋರ್‌ ಅರಣ್ಯ ಪ್ರದೇಶದಲ್ಲಿ ಭಾನುವಾರ ನಡೆದಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

           ಮಂಡೋರಿ ಹಳ್ಳಿಯ ಸುನಿತಾ ತಮ್ಮ ಮಗಳು ದಿವ್ಯಾಂಶಿ ಜೊತೆ ಶನಿವಾರ ಸಂಜೆ ಹುಲ್ಲು ತರಲು ಕಾಡಿಗೆ ಹೋದ ವೇಳೆ ಈ ಘಟನೆ ನಡೆದಿದೆ ಎಂದು ಧಾಂಪುರದ ನಾಯಬ್‌ ತಹಶೀಲ್ದಾರ್ ವಿವೇಕ್ ತಿವಾರಿ ತಿಳಿಸಿದರು.

               ಕಾಡಿನಲ್ಲಿ ಬಾಲಕಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದೆ. ಅಲ್ಲಿದ್ದ ಮಹಿಳೆಯರು ಜೋರಾಗಿ ಕೂಗಿದ್ದರ ಪರಿಣಾಮ ಗಾಯಗೊಂಡ ಬಾಲಕಿಯನ್ನು ಹಾಗೆಯೇ ಬಿಟ್ಟು ಚಿರತೆ ತೆರಳಿದೆ. ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries