ನವದೆಹಲಿ: ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ಮತ್ತು ಸವಾಲಿನ ಕುರಿತ ವಿಚಾರಗಳನ್ನು ಚರ್ಚಿಸಲು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಜುಲೈ 3 ಮತ್ತು 4 ರಂದು ಜಾಗತಿಕ ಮಟ್ಟದ ಎಐ ಶೃಂಗಸಭೆಯನ್ನು ಹಮ್ಮಿಕೊಂಡಿದೆ.
ನವದೆಹಲಿ: ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ಮತ್ತು ಸವಾಲಿನ ಕುರಿತ ವಿಚಾರಗಳನ್ನು ಚರ್ಚಿಸಲು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಜುಲೈ 3 ಮತ್ತು 4 ರಂದು ಜಾಗತಿಕ ಮಟ್ಟದ ಎಐ ಶೃಂಗಸಭೆಯನ್ನು ಹಮ್ಮಿಕೊಂಡಿದೆ.
'ಗ್ಲೋಬಲ್ ಇಂಡಿಯಾ ಎಐ ಶೃಂಗಸಭೆ 2024'ರ ಮೂಲಕ, ಭಾರತವು ಎಐ ಆವಿಷ್ಕಾರದಲ್ಲಿ ಜಾಗತಿಕ ನಾಯಕನಾಗಿ ಗುರುತಿಸಿಕೊಳ್ಳಲಿದೆ.
ಈ ಕಾರ್ಯಕ್ರಮವು ಎರಡು ದಿನಗಳ ಕಾಲ ನಡೆಯಲಿದ್ದು, ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಅಭಿವೃದ್ಧಿ, ನಿಯೋಜನೆ ಮತ್ತು ಅಳವಡಿಕೆಗಿರುವ ಬದ್ಧತೆಯನ್ನು ಸರ್ಕಾರ ಎತ್ತಿಹಿಡಿಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಕಾರ್ಯಕ್ರಮದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಖಾತೆ ಸಚಿವ ಜಿತಿನ್ ಪ್ರಸಾದ್ ಮಾತನಾಡಲಿದ್ದಾರೆ.
ಈ ಸಭೆಯು ಪ್ರಮುಖ ಅಂತರರಾಷ್ಟ್ರೀಯ ಎಐ ತಜ್ಞರಿಗೆ ವೇದಿಕೆಯನ್ನು ಒದಗಿಸಲಿದೆ. ವಿಜ್ಞಾನ, ಕೈಗಾರಿಕೆ, ಸರ್ಕಾರ, ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವು ವಿಭಾಗಗಳ ತಜ್ಞರು ಎಐ ಬಗೆಗಿನ ಮಾಹಿತಿ ಮತ್ತು ಸವಾಲುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.