ಪ್ರಸ್ತುತ ಹಲವು ವರ್ಷಗಳಿಂದ ಕೇಳಿಬರುವ ಕೂಗು ನ್ಯೂಸ್ ಪ್ರಿಂಟ್(ಕಾಗದ) ಮಾಡಲು ಮರಗಳು ಸಾಕಾಗುತ್ತಿಲ್ಲ. ಜೊತೆಗೆ ಪರಿಸರ ಹಾನಿಯೂ ಆಗುತ್ತಿದೆ ಎಂಬುದು. ಮರಗಳ ಕೋಶಗಳಲ್ಲಿ ಕಂಡುಬರುವ ಪಾಲಿಮರ್ ಲಿಗ್ನಿನ್ ವಿಭಜನೆಯಾದಾಗ, ಅದು ನ್ಯೂಸ್ ಪ್ರಿಂಟ್ ಮಾಡಲು ಅಗತ್ಯವಾದ ಸೆಲ್ಯುಲೋಸ್ ಅನ್ನು ರೂಪಿಸುತ್ತದೆ.
ಆದರೆ ಆ ರಾಸಾಯನಿಕ ಪ್ರಕ್ರಿಯೆಯಲ್ಲಿ ಪ್ರಕೃತಿಗೆ ದೊಡ್ಡ ಹೊಡೆತ ಬೀಳುತ್ತದೆ. ಏಕೆಂದರೆ ಆಗ ಲೆಕ್ಕವಿಲ್ಲದಷ್ಟು ಹಸಿರುಮನೆ ಅನಿಲಗಳು ಬಿಡುಗಡೆಯಾಗುವುದಿಲ್ಲ.
ಆದರೆ ಇನ್ನು ತಲೆಬಿಸಿ ಅಗತ್ಯವಿಲ್ಲ ಎನಿಸುತ್ತಿದೆ. ಉತ್ತರ ಕೆರೊಲಿನಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರ ತಂಡವು ಈ ಸಮಸ್ಯೆ ಪರಿಹಾರಕ್ಕೆ ಒಂದು ಮಾರ್ಗವನ್ನು ರೂಪಿಸಿದೆ. ಇಲ್ಲಿ, ಸಂಶೋಧಕರು ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಅನ್ವಯಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇದು ಅನುವಂಶಿಕ ವಂಶವಾಹಿಗಳನ್ನು ಕತ್ತರಿಸುವ ಮೂಲಕ ಹೊಸ ಜೀವ ರೂಪಗಳಿಗೆ ಜೀವ ನೀಡುತ್ತದೆ.
ಜೀನ್ ಎಡಿಟಿಂಗ್ ತಂತ್ರ 'ಅಖISPಖ' ಅನ್ನು ಬಳಸಿಕೊಂಡು ಲಿಗ್ನಿನ್-ಮುಕ್ತ ಮರಗಳನ್ನು ರಚಿಸಿದೆ. ಹೀಗೆ ಉತ್ಪಾದನೆಯಾಗುವ ಮರಗಳಿಂದ ಕಾಗದ ತಯಾರಿಕೆಯ ವೆಚ್ಚ ಕಡಮೆಯಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಮತ್ತು ನ್ಯೂಸ್ ಪ್ರಿಂಟ್ ಉತ್ಪಾದನೆಯ ವೆಚ್ಚವನ್ನು ಕಡಮೆ ಮಾಡಬಹುದೆಂಬ ಲೆಕ್ಕಾಚಾರ ಅವರು.