ಮುಂಬೈ: ಇವಿಎಂ ಮತಯಂತ್ರಗಳನ್ನು ಅನ್‌ಲಾಕ್ ಮಾಡಬಹುದು ಎಂದು ವರದಿ ಪ್ರಕಟಿಸಿದ್ದ ಮಿಡ್ ಡೇ ಪತ್ರಿಕೆ ಹಾಗೂ ಈ ಮಾಹಿತಿಯನ್ನು ಪ್ರಚಾರ ಮಾಡಿದ ಪತ್ರಕರ್ತರು ಹಾಗೂ ರಾಜಕಾರಣಿಗಳ ವಿರುದ್ಧ ದೂರು ದಾಖಲಾಗಿದೆ.
ಮುಂಬೈ: ಇವಿಎಂ ಮತಯಂತ್ರಗಳನ್ನು ಅನ್‌ಲಾಕ್ ಮಾಡಬಹುದು ಎಂದು ವರದಿ ಪ್ರಕಟಿಸಿದ್ದ ಮಿಡ್ ಡೇ ಪತ್ರಿಕೆ ಹಾಗೂ ಈ ಮಾಹಿತಿಯನ್ನು ಪ್ರಚಾರ ಮಾಡಿದ ಪತ್ರಕರ್ತರು ಹಾಗೂ ರಾಜಕಾರಣಿಗಳ ವಿರುದ್ಧ ದೂರು ದಾಖಲಾಗಿದೆ.
ಮಿಡ್ ಡೇ ಪತ್ರಿಕೆ ಹಾಗೂ ಮೇಲಿನ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅಡ್ವೋಕೇಟ್ ವಿವೇಕಾನಂದ್ ದಯಾನಂದ್ ಗುಪ್ತಾ ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಜೂನ್ 16ರಂದು ಮಿಡ್ ಡೇ ಪತ್ರಿಕೆಯಲ್ಲಿ ಇವಿಎಂ ಮತಯಂತ್ರಗಳನ್ನು ಮೊಬೈಲ್ ಮೂಲಕ ಅನ್‌ಲಾಕ್ ಮಾಡಬಹುದು ಎಂದು ವರದಿ ಪ್ರಕಟಿಸಲಾಗಿತ್ತು. ಈ ವರದಿಯನ್ನು ಬೆಂಬಲಿಸಿ ಹಲವರು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಪತ್ರಿಕೆ ಹಾಗೂ ಸುದ್ದಿ ವಾಹಿನಿಗಳಲ್ಲಿ ವರದಿ ಪ್ರಕಟಿಸಿದ್ದರು.
ಇಲ್ಲಿನ ರಾಜಕಾರಣಿಗಳು ಸಹ ಈ ವರದಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಇದೀಗ ಇವರ ವಿರುದ್ಧ ದೂರ ದಾಖಲಾಗಿದೆ.