ಕಾಸರಗೋಡು: ಬಿರುಸುಗೊಂಡು ಮುಂದುವರಿಯುತ್ತಿರುವ ಮಳೆಯ ಕಾರಣ ನಾಳೆ(ಆ.1) ರಂದೂ ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಇನ್ಬಾಶೇಖರ್ ಆದೇಶ ಹೊರಡಿಸಿದ್ದಾರೆ.
ಮಳೆಯ ಕಾರಣ ಮಕ್ಕಳು, ಹಿರಿಯ ನಾಗರಿಕರು ಮನೆಯಿಂದ ಹೊರ ತೆರಳದಂತೆ, ಆರೋಗ್ಯ ದೃಷ್ಟಿಯಿಂದ ಬಿಸಿರುನೀರು ಸೇವನೆ, ಪೌಷ್ಠಿಕ ಆಹಾರ ಸೇವನೆಗಳಂತಹ ಕ್ರಮಗಳನ್ನೂ ಪಾಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.