ತಿರುವನಂತಪುರ: ದೇಗುಲದೊಳಗೆ ಪೂಜೆ ನೆರವೇರಿಸುತ್ತಿದ್ದ ವೇಳೆ ದೇವಸ್ಥಾನಕ್ಕೆ ನುಗ್ಗಿದ ಪೋಲೀಸರು ಅರ್ಚಕನನ್ನು ಬಲವಂತವಾಗಿ ವಶಕ್ಕೆ ಪಡೆದ ಘಟನೆ ನಡೆದಿದೆ.
ಮಣಕ್ಕಾಡ್ ಮುತ್ತುಮಾರಿ ಅಮ್ಮನ್ ದೇವಸ್ಥಾನದ ಅರ್ಚಕ ಅರುಣ್ ಪೋತ್ತಿ ಎಂಬವರನ್ನು ಪೂಂತುರ ಪೋಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ಸಂಜೆ ೫.೪೫ರ ಸುಮಾರಿಗೆ ಅರುಣ್ ಪೋತ್ತಿಯನ್ನು ಪೋಲೀಸ್ ತಂಡ ವಶಕ್ಕೆ ತೆಗೆದುಕೊಂಡಿದೆ.
ಜೂನ್ ೨೫ ರಂದು ಪೂಂತುರಾ ದೇವಿ ದೇವಸ್ಥಾನದಲ್ಲಿ ನಡೆದ ಪಂಚಲೋಹದ ವಿಗ್ರಹ ದರೋಡೆಗೆ ಸಂಬAಧಿಸಿದAತೆ ಈ ಬಂಧನ ನಡೆದಿದೆ. ಈ ಹಿಂದೆ ಅರುಣ್ ಈ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಆದರೆ ವಿಗ್ರಹ ನಾಪತ್ತೆಗೂ ತನಗೂ ಸಂಬAಧವಿಲ್ಲ ಎಂದು ಹೇಳಿದರೂ ಪೋಲೀಸರು ಬಲವಂತವಾಗಿ ಅರುಣ್ ನನ್ನು ಕರೆದೊಯ್ದಿದ್ದಾರೆ. ದೇವಸ್ಥಾನದ ಅಧಿಕಾರಿಗಳು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಪೋಲೀಸರು ಅರುಣ್ ಅವರನ್ನು ೮ ಗಂಟೆಗೆ ಬಿಡುಗಡೆಗೊಳಿಸಿದರು.
ಹಲವು ಬಾರಿ ಕರೆ ಮಾಡಿದರೂ ಪೋನ್ ಸ್ವೀಕರಿಸದ ಕಾರಣ ವಶಕ್ಕೆ ಪಡೆಯಲಾಗಿದೆ ಎಂದು ಪೋಲೀಸರು ವಿವರಿಸಿದ್ದಾರೆ. ಆದರೆ ಪೋಲೀಸರು ಕರೆ ಮಾಡಿದಾಗ ಶನಿವಾರ ಠಾಣೆಗೆ ಬರುವುದಾಗಿ ಭರವಸೆ ನೀಡಿದ್ದಾಗಿ ಅರುಣ್ ಹೇಳಿದ್ದಾರೆ. ಪೂಜೆ ನಡೆಯುತ್ತಿದ್ದು, ಬಳಿಕ ಬರುತ್ತೇನೆ ಎಂದು ಅರುಣ್ ಕುಮಾರ್ ಹೇಳಿದರೂ ಪೋಲೀಸರು ಕೇಳಲು ಸಿದ್ಧರಿರಲಿಲ್ಲ. ಮಾಡದ ಅಪರಾಧಕ್ಕೆ ಕೈಕೋಳ ಹಾಕಿ ಕರೆದುಕೊಂಡು ಹೋಗಿದ್ದು, ಯಾವತ್ತೂ ಇಷ್ಟೊಂದು ಅವಮಾನ ಅನುಭವಿಸಿರಲಿಲ್ಲ ಎಂದು ಅರುಣ್ ಕುಮಾರ್ ಹೇಳಿದ್ದಾರೆ.
ಮುತ್ತುಮಾರಿ ಅಮ್ಮನ್ ದೇವಾಲಯದ ಅಧಿಕಾರಿಗಳು ದೇವಾಲಯ ತೆರೆದಿರುವಾಗ ಅರ್ಚಕನನ್ನು ಬಲವಂತವಾಗಿ ಬಂಧಿಸಿದ ವಿರುದ್ಧ ಪೋರ್ಟ್ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದರು. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು ಎಂದು ನಗರ ಪೋಲೀಸ್ ಆಯುಕ್ತ ಸ್ಪರ್ಜನ್ ಕುಮಾರ್ ತಿಳಿಸಿದ್ದಾರೆ. ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ನಂದಕುಮಾರ್ ಮಾತನಾಡಿ, ಪೋಲೀಸರ ವಿನಾಕಾರಣ ಪ್ರವೇಶದಿಂದ ಹಲವು ಪೂಜೆಗಳು ಸ್ಥಗಿತಗೊಂಡಿವೆ ಎಂದು ತಿಳಿಸಿರುವರು.