ಕಾಸರಗೋಡು: ಅಮೃತ್ ಭಾರತ್ ರೈಲು ನಿಲ್ದಾಣದ ಕಾಮಗಾರಿಯ ಪ್ರಗತಿ ಪರಿಶೀಲನೆಗಾಗಿ ಪಾಲಕ್ಕಾಡ್ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರುಣ್ ಕುಮಾರ್ ಚತುರ್ವೇದಿ ನೇತೃತ್ವದ ಅಧಿಕಾರಿಗಳ ತಂಡ ಕಾಸರಗೋಡಿಗೆ ಭೇಟಿ ನೀಡಿತು.
ಎಡಿಆರ್‍ಎಂ ಎಸ್.ಜಯಕೃಷ್ಣನ್, ಸೀನಿಯರ್ ಡಿಇಎನ್ ಸಂಯೋಜಕ ಮೊಹಮ್ಮದ್ ಅಸ್ಲಾಂ ಅವರು ಜತೆಗಿದ್ದರು. ಅಧಿಕಾರಿಗಳ ತಂಡವು ಕಾಸರಗೋಡು ರೈಲ್ವೆ ನಿಲ್ದಾಣ ಬಳಿ ನಿರ್ಮಾಣದಲ್ಲಿರುವ ಅಮೃತ್‍ಭಾರತ್ ನಿಲ್ದಾಣದ ಕಾಮಗಾರಿಗಳ ಬಗ್ಗೆ ಅವಲೋಕನ ನಡೆಸಿತು. ನಂತರ ಕಣ್ಣೂರು, ತಲಶ್ಶೇರಿ, ಮಾಹಿ ಮತ್ತು ವಡಕರ ನಿಲ್ದಾಣಗಳಿಗೆ ಭೇಟಿ ನೀಡಿದರು.