ಕಾಸರಗೋಡು: ತೃಇಕ್ಕರಿಪುರ-ಪಯ್ಯನ್ನೂರು ನಡುವಿನ ರಾಮವಿಲ್ಲಂ ಒಳವರ ರೈಲ್ವೆ ಹಳಿಯಲ್ಲಿ ಸುಮಾರು ಒಂದುರವರೆ ಮೀ. ವರೆಗೆ ಹಳಿಯ ಮೇಲೆ ಕಲ್ಲನ್ನಿರಿಸಿ ಬುಡಮೇಲು ಕೃತ್ಯಕ್ಕೆ ಸಂಚು ನಡೆಸಿರುವ ಪ್ರಕರಣದ ತನಿಖೆಯನ್ನು ರಾಷ್ಟಿçÃಯ ತನಿಖಾ ಸಂಸ್ಥೆ ವಹಿಸಿಕೊಳ್ಳಲಿದೆ. ಪ್ರಸಕ್ತ ರೈಲ್ವೆ ಭದ್ರತಾ ಪಡೆ(ಆರ್‌ಪಿಎಫ್)ಪ್ರಕರಣದ ತನಿಖೆ ನಡೆಸುತ್ತಿದ್ದರೆ, ಇನ್ನೊಂದೆಡೆ ರೈಲ್ವೆ ಪೊಲೀಸ್ ಹಾಗೂ ಚಂದೇರ ಠಾಣೆ ಪೊಲೀಸರು ಸಮಾನಾಂತರ ತನಿಖೆ ನಡೆಸುತ್ತಿದ್ದಾರೆ.
ಕಾರ್ಗಿಲ್ ವಿಜಯೋತ್ಸವದ ೨೫ನೇ ವಾರ್ಷಿಖ ದಿನದಂದು ಹಳಿಯಲ್ಲಿ ಕಲ್ಲುಗಳನ್ನಿರುಸುವ ಮೂಲಕ ಬುಡಮೇಲು ಕೃತ್ಯಕ್ಕೆ ಯತ್ನಿಸಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಹಳಿಯಲ್ಲಿ ಕಲ್ಲುಗಳನ್ನಿರಿಸಿ ಬುಡಮೇಲು ಕೃತ್ಯ ನಡೆಸಲೆತ್ನಿಸಿದವರ ಪತ್ತೆಗಾಗಿ ಸನಿಹದ ಸಿಸಿ ಕ್ಯಾಮರಾ ದೃಶ್ಯಾವಳಿ ಆರ್‌ಪಿಎಫ್ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ವೆಸ್ಟ್ಕೋಸ್ಟ್ ರೈಲು ಈ ಹಾದಿಯಾಗಿ ಹಾದುಹೋಗುವ ಅಲ್ಪ ಮೊದಲು ರೈಲ್ವೆ ಹಳಿಯಲ್ಲಿ ಕಲ್ಲುಗಳನ್ನಿರಿಸಲಾಘಿದ್ದು, ಹಳಿ ತಪಾಸಣಾ ಸಿಬ್ಬಂದಿ ಇದನ್ನು ಪತ್ತೆಹಚ್ಚಿ ತೆರವುಗೊಳಿಸಿದ್ದರು.