ತಿರುವನಂತಪುರಂ: ಮೆಡಿಕಲ್ ಕಾಲೇಜಿನಲ್ಲಿ ಮತ್ತೆ ಲಿಫ್ಟ್ನಲ್ಲಿ ರೋಗಿ ಹಾಗೂ ಮಹಿಳಾ ವೈದ್ಯೆ ಸಿಲುಕಿಕೊಂಡ ಘಟನೆ ನಡೆದಿದೆ. ತುರ್ತು ವಿಭಾಗದಿಂದ ಸಿ.ಟಿ. ಸ್ಕ್ಯಾನ್ ಮಾಡಲು ತೆರಳುವಾಗ ಇಬ್ಬರೂ ಲಿಫ್ಟ್ನಲ್ಲಿ ಸಿಲುಕಿಕೊಂಡರು. ವಿಷಯ ತಿಳಿದ ವೈದ್ಯಕೀಯ ಕಾಲೇಜು ಪೋಲೀಸರು ಹಾಗೂ ಇತರರು ಸ್ಥಳಕ್ಕೆ ಆಗಮಿಸಿದ್ದರು. ಇದಾದ ಬಳಿಕ ಅವರನ್ನು ಹೊರಗೆ ಕರೆತರಲಾಯಿತು.
ಲಿಫ್ಟ್ನಲ್ಲಿ ಸಿಕ್ಕಿಹಾಕಿಕೊಂಡ ನಂತರ ವೈದ್ಯರು ಅಲಾರಾಂ ಒತ್ತಿದ್ದು, ಅಲ್ಲಿದ್ದ ತಂತ್ರಜ್ಞರು ಬಂದು ಇಬ್ಬರನ್ನೂ ರಕ್ಷಿಸಿದ್ದಾರೆ. ರೋಗಿಯು ಗಾಲಿಯಲ್ಲಿ ಲಿಪ್ಟ್ ನೊಳಗಿದ್ದರು. ಲಿಫ್ಟ್ ತಾತ್ಕಾಲಿಕವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಹೆಚ್ಚಿನ ತಂತ್ರಜ್ಞರು ಆಗಮಿಸಿ ದುರಸ್ತಿ ಪೂರ್ಣಗೊಳಿಸಿದ ನಂತರವೇ ರೋಗಿಗಳನ್ನು ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯ ಹಲವು ಭಾಗಗಳಲ್ಲಿ ಪುರಾತನ ಲಿಫ್ಟ್ಗಳು ಈಗಲೂ ಇವೆ. ಇತ್ತೀಚೆಗಿನ ಸರಣಿ ಘಟನೆಗಳು ಸಮಯಕ್ಕೆ ಸರಿಯಾಗಿ ದುರಸ್ತಿಯಾಗುತ್ತಿಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಮೊನ್ನೆ, ಉಳ್ಳೂರಿನ ರವೀಂದ್ರನ್ ಎಂಬ ರೋಗಿಯೊಬ್ಬರು ತಿರುವನಂತಪುರಂ ಮೆಡಿಕಲ್ ಕಾಲೇಜಿನ ಲಿಫ್ಟ್ನಲ್ಲಿ 42 ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಮಧ್ಯಾಹ್ನ 12 ಗಂಟೆಗೆ ಲಿಫ್ಟ್ನಲ್ಲಿ ಸಿಲುಕಿದ್ದ ಅವರನ್ನು ಸೋಮವಾರ ಬೆಳಗ್ಗೆ 6 ಗಂಟೆಗೆ ಹೊರ ತರಲಾಯಿತು.