ಪೆರ್ಲ: ವಿಷ ಸೇವಿಸಿ ಗಂಭೀರವಸ್ಥೆಯಲ್ಲಿದ್ದ ವ್ಯಕ್ತಿ, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಪೆರ್ಲ ಬಜಕೂಡ್ಲು ನಿವಾಸಿ ಗಿರಿಧರ ಪೂಜಾರಿ (56) ಮೃತಪಟ್ಟವರು. ಪೆರ್ಲ ಶ್ರೀ ಅಯ್ಯಪ್ಪ ಮಂದಿರ ವಠಾರದಲ್ಲಿ ವಿಷ ಸೇವಿಸಿ ಗಂಭೀರವಸ್ಥೆಯಲ್ಲಿ ಕಂಡುಬಂದಿದ್ದ ಇವರನ್ನು ಕಾಸರಗೋಡಿನ ಆಸ್ಪತ್ರೆಯೊಂದಕ್ಕೆ ಸಾಗಿಸಿ ಪ್ರಥಮ ಚಿಕಿತ್ಸೆ ನಂತರ ಮಂಗಳೂರಿಗೆ ಕರೆದೊಯ್ಯುವ ಮಧ್ಯೆ ಸಾವು ಸಂಭವಿಸಿದೆ.
ಘನ ವಾಹನ ಚಾಲಕರಾಗಿದ್ದ ಇವರು ಶ್ರೀ ಅಯ್ಯಪ್ಪ ವ್ರತಧಾರಿಯಾಗಿ ದೀರ್ಘ ಕಾಲದಿಂದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತ ಬರುತ್ತಿದ್ದರು. ಪೆರ್ಲ ಶ್ರೀ ಅಯ್ಯಪ್ಪ ಮಂದಿರದ ಗುರುಸ್ವಾಮಿಯಾಗಿದ್ದರು. ವಿಶ್ವಹಿಂದೂ ಪರಿಷತ್ ಸಮಿತಿ, ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ಪದಾಧಿಕಾರಿಯಾಗಿದ್ದರು. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.