ಮಂಗಳೂರು: ಕಾಸರಗೋಡು ಜಿಲ್ಲಾ ಬಂಟರ ಕಟ್ಟಡ ಸಮಿತಿಯ ವಿಶೇಷ ಸಭೆ ಮಂಗಳೂರು ಕ್ವಾಲಿಟಿ ಹೋಟೆಲ್ ಸಭಾಂಗಣದಲ್ಲಿ ಜರಗಿತು. ಕುಂಬಳೆ ಸಮೀಪ ನಾಯ್ಕಪಿನಲ್ಲಿ ಸಕಲ ವ್ಯವಸ್ಥೆಯೊಂದಿಗೆ ಸುಸಜ್ಜಿತ ಸಭಾಂಗಣ ಕೆಲಸ ಪ್ರಾರಂಭಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ರಂಗದ ಮುಂದಾಳು ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕøತ ಕೆ. ಕೆ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಕೊಡುಗೈ ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಘುರಾಮ ಶೆಟ್ಟಿ ಕುಳೂರು ಕನ್ಯಾನ, ಹುಡ್ಕೋ ರವೀಂದ್ರ ಆಳ್ವ, ಉದ್ಯಮಿ ಕೆ. ಡಿ ಶೆಟ್ಟಿ ದಡ್ಡಂಗಡಿ ಗುತ್ತು, ಉದ್ಯಮಿ ಸಂಜೀವ ಶೆಟ್ಟಿ ತಿಂಬರ,ಕರ್ನಾಟಕ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಉದ್ಯಮಿ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಮಧುಕರ ರೈ ಕೊರೆಕ್ಕಾನ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿಜಿ ಚಂದ್ರಹಾಸ ರೈ, ಕೋಶಾಧಿಕಾರಿ ಚಿದಾನಂದ ಆಳ್ವ ಮಂಜಕೊಟ್ಟಿಗೆ, ಕೋಳಾರು ಸತೀಶ್ಚಂದ್ರ ಭಂಡಾರಿ, ಪಟ್ಲ ದಾಮೋದರ್ ಶೆಟ್ಟಿ, ಪದ್ಮನಾಭ ಶೆಟ್ಟಿ ವಳಮಲೆ, ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು, ಗೋಪಾಲಕೃಷ್ಣ ಶೆಟ್ಟಿ ಕುತ್ತಿಕಾರು, ಕಿರಣ್ ಮಾಡ, ಮತ್ತು ವಿವಿಧ ಪಂಚಾಯತಿ ಘಟಕದ ಅಧ್ಯಕ್ಷರುಗಳು, ವಿಶೇಷ ಪ್ರತಿನಿಧಿಗಳು ಭಾಗವಹಿಸಿದ್ದರು.
ರಾಮಕೃಷ್ಣ ವಿದ್ಯಾಲಯದ ಸಂಚಾಲಕ ನಾರಾಯಣ ಹೆಗಡೆ ಕೋಡಿಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಐ. ಸುಬ್ಬಯ್ಯ ರೈ ಸ್ವಾಗತಿಸಿ, ಜಿಲ್ಲಾ ಬಂಟರ ಸಂಘದ ಕಾರ್ಯದರ್ಶಿ ಮೋಹನ್ ರೈ ಕಯ್ಯಾರ್ ವಂದಿಸಿದರು.