HEALTH TIPS

ಸಹಕಾರಿ ವಲಯವು ಜನರನ್ನು ಪರಸ್ಪರ ಸಮನ್ವಯಗೊಳಿಸುವುದರ ಜೊತೆಗೆ `ಭಾರತದ ಆರ್ಥಿಕ ವಲಯವನ್ನು ಬಲಪಡಿಸುವ ಕ್ಷೇತ್ರವಾಗಿದೆ: ಕೇಂದ್ರ ಸಚಿವ ಜೋರ್ಜ್ ಕುರ್ಯನ್

           ಕಾಸರಗೋಡು: ಸಹಕಾರಿ ವಲಯವು ಜನರನ್ನು ಪರಸ್ಪರ ಸಮನ್ವಯಗೊಳಿಸುವುದರ ಜೊತೆಗೆ ಭಾರತದ ಆರ್ಥಿಕ ವಲಯವನ್ನು ಬಲಪಡಿಸುವ ಕ್ಷೇತ್ರವಾಗಿದೆಯೆಂದು ಕೇಂದ್ರ ಫಿಶರೀಸ್, ಪಶುಸಂಗೋಪನೆ, ಅಲ್ಪ ಸಂಖ್ಯಾತ ವ್ಯವಹಾರ ಖಾತೆ ರಾಜ್ಯ ಸಚಿವ ಜೋರ್ಜ್ ಕುರ್ಯನ್ ಹೇಳಿದ್ದಾರೆ.

         ಕಾಸರಗೋಡು ಕೋ ಓಪರೇಟಿವ್ ಟೌನ್ ಬ್ಯಾಂಕ್ ನವೀಕರಿಸಿದ ಪ್ರಧಾನ ಕಚೇರಿ ಕಟ್ಟಡವನ್ನು ಶನಿವಾರ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

          ಸಹಕಾರಿ ವಲಯದ ಸಹಕಾರದಿಂದ ಭಾರತಕ್ಕೆ ಮುಂದಕ್ಕೆ ಸಾಗಲು ಸಾಧ್ಯವಾಗಿದೆ. ಇದರಿಂದಾಗಿ ಭಾರತವು ಉನ್ನತ ಮಟ್ಟಕ್ಕೇರುತ್ತಿದೆ. ಸಹಕಾರಿ ವಲಯವನ್ನು ಬಲಪಡಿಸಬೇಕೆಂಬುದು ಬಿಜೆಪಿ ನಿಲುವಾಗಿದೆ. ಆದುದ್ದರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಬಳಿಕ ನೂತನ ಸಹಕಾರಿ ಸಚಿವಾಲಯವನ್ನು ಪ್ರಾರಂಭಿಸಿದೆ. ಇತರ ಆರ್ಥಿಕ ವಲಯಗಳು ಜನರನ್ನು ವಿವಿಧ ರೀತಿಯಲ್ಲಿ ಶೋಷಣೆ ಮಾಡುತ್ತಿದೆ. ಅದರೆ ಸಹಕಾರಿ ವಲಯವು ಜನರ ಹಣಕ್ಕೆ ಭದ್ರಕೋಟೆಯಾಗಿದೆ. ಮಾಲಕರನ್ನು ಆಶ್ರಯಿಸಿದ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಅದಕ್ಕೆ ಇವೆಲ್ಲದಕ್ಕೂ ಪರಿಹಾರ ಸಹಕಾರಿ ವಲಯವಾಗಿದೆ ಎಂದರು.

             ಸಮಾರಂಭದಲ್ಲಿ ಬ್ಯಾಂಕ್ ಅಧ್ಯಕ್ಷ , ವಕೀಲ ಎ.ಸಿ.ಅಶೋಕ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. 

           ಶಾಸಕ ಎನ್.ಎ.ನೆಲ್ಲಿಕುನ್ನು , ಆರ್‍ಎಸ್‍ಎಸ್ ಕಾಸರಗೋಡು ಜಿಲ್ಲಾ ಸಂಘಚಾಲಕ್ ಕೆ.ಪ್ರಭಾಕರನ್ ಮಾಸ್ತರ್, ಕೆ.ದಾಮೋದರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. 

          ಸಹಕಾರಿ ಸಂಘದ ಮಣಿಕಂಠನ್ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಕೃಷಿ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಕಣ್ಣನ್, ನಗರಸಭಾ ಸದಸ್ಯೆಶ್ರೀಲತಾ ಟೀಚರ್, ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಐತ್ತಪ್ಪ  ಮವ್ವಾರು, ಕಾಸರಗೋಡು ಕೋ ಓಪರೇಟಿವ್ ಟೌನ್ ಬ್ಯಾಂಕ್ ಎಂಪ್ಲಾಯೀಸ್ ಸಂಘದ ಅಧ್ಯಕ್ಷ ವಕೀಲ ಪಿ.ಮುರಳೀಧರನ್, ಬ್ಯಾಂಕ್‍ನ  ನಿರ್ದೇಶಕ, ವಕೀಲ ಕೆ.ಕರುಣಾಕರನ್ ನಂಬ್ಯಾರ್ ಶುಭಹಾರೈಸಿದರು.

              ಬ್ಯಾಂಕ್ ಉಪಾಧ್ಯಕ್ಷ ಕೆ.ಮಾಧವ ಹೇರಳ ಸ್ವಾಗತಿಸಿ, ಬ್ಯಾಂಕ್‍ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆರ್.ವಿ.ಸುರೇಶ್ ಕುಮಾರ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries