ಕಾಸರಗೋಡು: ಕಾಸರಗೋಡು ಜಿಲ್ಲಾ ನಿರ್ಮಿತಿ ಕೇಂದ್ರವು ಕಾಸರಗೋಡಿನಲ್ಲಿ ೩ ಅಪ್ರೆಂಟೀಸ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಅಗಸ್ಟ್ ೫. ಅಂಗೀಕೃತ ವಿಶ್ವ ವಿದ್ಯಾಲಯದಿಂದ ಪಡೆದ ಸಿವಿಲ್ ಇಂಜಿನಿಯರಿAಗ್ ಪದವಿ ಅಥವಾ ಪಾಲಿಟೆಕ್ನಿಕ್ ನಿಂದ ಡಿಪ್ಲೊಮಾ ಪಡೆದವರಿಗೆ ಅರ್ಜಿ ಸಲ್ಲಿಸಬಹುದು. ಸೆಕೆಂಡರಿ ವಿಭಾಗದಿಂದ ಒಂದೊAದು ಪರೀಕ್ಷೆಯಲ್ಲಿ ಪಡೆದ ಅಂಕ. ಗ್ರೇಡ್, ಮೊದಲಾದ ವಿವರಗನ್ನು ಒಳಗೊಂಡ ಫೋಟೋ ಲಗತ್ತಿಸಿದ ಅರ್ಜಿಯ ಜೊತೆಗೆ,ಬಯೋಡೇಟಾ, ಅರ್ಹತೆ ಉದ್ಯೋಗದ ಅನುಭವ ಎಂಬಿವುಗಳನ್ನು ಸಾಬೀತು ಪಡಿಸುವ ಸ್ವಯಂ ದೃಢೀಕರಿಸಿದ ಪ್ರಮಾಣ ಪತ್ರಗಳ ಸಹಿತ ಅಗಸ್ಟ್ ೫ ಸಂಜೆ ೪:೦೦ ಗಂಟೆಯ ತನಕ ಅರ್ಜಿಗಳನ್ನು ಅಂಚೆಯ ಮೂಲಕ ಸ್ವೀಕರಿಸಲಾಗುತ್ತದೆ. ವಯೋಮಿತಿ ೩೫ ವರ್ಷಗಳು. ಇದರ ಹೆಚ್ಚಿನ ಮಾಹಿತಿಗಳನ್ನು ನಿರ್ಮಿತಿ ಕೇಂದ್ರ ಕಛೇರಿಯಿಂದ ಪಡೆದುಕೊಳ್ಳಬಹುದಾಗಿದೆ. ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಜನರಲ್ ಮೆನೇಜರ್
ಜಿಲ್ಲಾ ನಿರ್ಮಿತಿ ಕೇಂದ್ರ
ಆನಂದಾಶ್ರಮ ಅಂಚೆ
೬೭೧೫೩೧
ಮೊಬೈಲ್ ಸಂಖ್ಯೆ: ೯೧೮೮೦೪೩೫೫೦