ಮುಜಫರ್‌ಪುರ(PTI): ಬ್ರಿಟನ್‌ನ ಮಾಜಿ ಪ್ರಧಾನಿ, ಭಾರತ ಮೂಲದ ರಿಷಿ ಸುನಕ್ ಅವರ ಸೋಲು ಭಾರತದ ಜನರಿಗೆ ಬೇಸರ ತರಿಸಿರಬಹುದು. ಆದರೆ, ಮುಜಫರ್‌ಪುರದ ಜನತೆ ಮಾತ್ರ ಇಲ್ಲಿನ ಮಣ್ಣಿನ ಮಗ ಕನಿಷ್ಕ ನಾರಾಯಣ್ ಅವರ ಯಶಸ್ಸಿಗೆ ಸಂಭ್ರಮಿಸುತ್ತಿದ್ದಾರೆ.
ಮುಜಫರ್‌ಪುರ(PTI): ಬ್ರಿಟನ್‌ನ ಮಾಜಿ ಪ್ರಧಾನಿ, ಭಾರತ ಮೂಲದ ರಿಷಿ ಸುನಕ್ ಅವರ ಸೋಲು ಭಾರತದ ಜನರಿಗೆ ಬೇಸರ ತರಿಸಿರಬಹುದು. ಆದರೆ, ಮುಜಫರ್‌ಪುರದ ಜನತೆ ಮಾತ್ರ ಇಲ್ಲಿನ ಮಣ್ಣಿನ ಮಗ ಕನಿಷ್ಕ ನಾರಾಯಣ್ ಅವರ ಯಶಸ್ಸಿಗೆ ಸಂಭ್ರಮಿಸುತ್ತಿದ್ದಾರೆ.
33 ವರ್ಷದ ಕನಿಷ್ಕ ಅವರು ಲೇಬರ್ ಪಕ್ಷದಿಂದ 'ವೇಲ್ ಆಫ್ ಗ್ಲಮೋರ್ಗನ್' ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.
'ಕನಿಷ್ಕ ಅವರು ಇಲ್ಲಿಯೇ ಜನಿಸಿದವರು. ಅವರು ಸಣ್ಣ ಹುಡುಗನಿದ್ದಾಗ ನಾವೆಲ್ಲ ಅವರನ್ನು ನೋಡಿದ್ದೇವೆ' ಎನ್ನುತ್ತಾರೆ ಇಲ್ಲಿನ ಸುತ್ತಮುತ್ತಲಿನ ಜನ. 'ಮೂರನೇ ತರಗತಿವರೆಗೂ ಅವರು ಇಲ್ಲಿಯೇ ಕಲಿತಿದ್ದರು. ನಂತರ, ಪೋಷಕರು ದೆಹಲಿಗೆ ಸ್ಥಳಾಂತರಗೊಂಡರು. ಕನಿಷ್ಕ ಅವರಿಗೆ 12 ವರ್ಷ ಇರುವಾಗ ಅವರು ಕಾರ್ಡಿಫ್ ನಗರಕ್ಕೆ ತೆರಳಿದರು' ಎಂದು ಜಯಂತ್ ಅವರು ಮಾಹಿತಿ ನೀಡಿದರು. ಕನಿಷ್ಕ ಅವರ ಪೋಷಕರು ಬ್ರಿಟನ್‌ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ.