ಕೊಚ್ಚಿ: ಭಯೋತ್ಪಾದನಾ ನಿಗ್ರಹ ಪಡೆಗಳು ಎರ್ನಾಕುಳಂ ದಕ್ಷಿಣ ರೈಲ್ವೆ ನಿಲ್ದಾಣದಲ್ಲಿ ಮಾವೋವಾದಿ ಸಂಪರ್ಕ ಹೊಂದಿರುವ ವ್ಯಕ್ತಿಯನ್ನು ಬಂಧಿಸಿವೆ. ತ್ರಿಶೂರ್ ಮೂಲದ ಮನೋಜ್ ಅಲಿಯಾಸ್ ಆಶಿಕ್ ಬಂಧಿತ ಆರೋಪಿ.
ಈತ ಮಾವೋವಾದಿಗಳ ನಡುವೆ ಸಂದೇಶವಾಹಕ ಎಂದು ವರದಿಯಾಗಿದೆ. ವಯನಾಡ್-ಕಣ್ಣೂರಿನಲ್ಲಿ ನೆಲೆಸಿರುವ ಸಿಪಿಐ ಮಾವೋವಾದಿ ದಂಡದಲ್ಲಿ ಈತ ಸಕ್ರಿಯನಾಗಿದ್ದ. 14 ಯುಎಪಿಎ ಪ್ರಕರಣಗಳಲ್ಲಿ ಈತ ಆರೋಪಿ.
ಭಯೋತ್ಪಾದನಾ ನಿಗ್ರಹ ಪಡೆಗಳು ಎರ್ನಾಕುಳಂಗೆ ತೆರಳಿ ದಕ್ಷಿಣ ರೈಲ್ವೆ ನಿಲ್ದಾಣದಲ್ಲಿ ಆತನನ್ನು ಗುರುವಾರ ಸಂಜೆ ಬಂಧಿಸಿವೆ. ವಯನಾಡಿನಲ್ಲಿ ನೆಲಬಾಂಬ್ ಪತ್ತೆ ಘಟನೆಯ ನಂತರ ಭಯೋತ್ಪಾದನಾ ನಿಗ್ರಹ ಪಡೆ ಮನೋಜ್ ಮೇಲೆ ನಿಗಾ ಇರಿಸಿತ್ತು. ಇದಾದ ಬಳಿಕ ಆತನನ್ನು ವಶಕ್ಕೆ ಪಡೆಯಲಾಗಿದೆ.
ವಿಶೇಷ ಕಾರ್ಯಾಚರಣೆ ಗುಂಪಿನ ಎಸ್ಪಿ ತಪೋಶ್ ಬಸುಮತರಿ ನೇತೃತ್ವದ ತಂಡವು ಆತನನ್ನು ಸೆರೆಹಿಡಿದಿದೆ. ಹಣ ಸಂಘಟಿಸಲು ಕೊಚ್ಚಿಗೆ ಬಂದಿದ್ದ ಎಂದು ತಿಳಿದುಬಂದಿದೆ. ಬ್ರಹ್ಮಪುರಂನಿಂದ ಹಣ ತೆಗೆದುಕೊಂಡು ಹಿಂತಿರುಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಸುಮಾರು 14 ಯು.ಎ.ಪಿ.ಎ. ಪ್ರಕರಣಗಳಲ್ಲಿ ಊತ ಆರೋಪಿಯಾಗಿದ್ದಾನೆ. ರೈಲಿನಲ್ಲಿ ಕುಳಿತಿದ್ದಾಗ ಸೆರೆಹಿಡಿಯಲಾಯಿತು.