HEALTH TIPS

ದೇಹದಲ್ಲಿ ಹೆಚ್ಚಾಗುತ್ತಿರುವ ಯೂರಿಕ್​ ಆಸಿಡ್​​ ನಿಯಂತ್ರಿಸುವುದು ಹೇಗೆ?: ಇಲ್ಲಿದೆ ಸಿಂಪಲ್​ ಟಿಪ್ಸ್

 ದೇಹದಲ್ಲಿರುವ ಯೂರಿಕ್​ ಆಮ್ಲದ ಬಗ್ಗೆ ನಿಮಗೆಷ್ಟು ಗೊತ್ತು? ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತವು ಯೂರಿಕ್ ಆಮ್ಲದ ಹೆಚ್ಚಳದಿಂದ ಉಂಟಾಗುತ್ತದೆ. ಇದು ನಿಮ್ಮನ್ನು ತುಂಬಾ ಭಾದಿಸುತ್ತದೆ. ಯೂರಿಕ್ ಆಮ್ಲವು ರಕ್ತದಲ್ಲಿನ ತ್ಯಾಜ್ಯ ಉತ್ಪನ್ನವಾಗಿದೆ. ಪ್ಯೂರಿನ್ ಎಂಬ ಸಂಯುಕ್ತಗಳು ಚಯಾಪಚಯಗೊಂಡಾಗ ಯೂರಿಕ್ ಆಮ್ಲವು ಉತ್ಪತ್ತಿಯಾಗುತ್ತದೆ.

ಇದರಿಂದ ಬಳಲುತ್ತಿರುವವರಿಗೆ ಅದನ್ನು ನಿಯಂತ್ರಿಸುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅದನ್ನು ನಿಯಂತ್ರಿಸಲು ಇಲ್ಲಿ ಕೆಲವು ಸಿಂಪಲ್ ಟಿಪ್ಸ್​​ ನೀಡಲಾಗಿದೆ.

  • ಕುಡಿಯುವ ನೀರು: ದೇಹವು ನಿರ್ಜಲೀಕರಣವಾಗುವುದು ಅಥವಾ ಅತಿಯಾಗಿ ಬೇವರುವುದು ಯೂರಿಕ್ ಆಸಿಡ್ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಅದನ್ನು ನಿಯಂತ್ರಿಸಲು ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯುವುದು ಉತ್ತಮ.
  • ತೂಕ ನಿರ್ವಹಣೆ: ಯೂರಿಕ್ ಆಸಿಡ್ ಮಟ್ಟಗಳು ಹೃದಯ ಕಾಯಿಲೆಗಳು, ಮಧುಮೇಹ ಇತರೆ ಕಾಯಿಲೆಗಳೊಂದಿಗೆ ಪರಸ್ಪರ ಸಂಬಂಧ ಹೊಂದಿದೆ. ವ್ಯಾಯಾಮದ ಮೂಲಕ ತೂಕ ನಿರ್ವಹಣೆ ಮಾಡುವುದರಿಂದ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಆಗುತ್ತದೆ.
  • ​ಸಕ್ಕರೆ-ಸಿಹಿ ಪಾನೀಯಗಳನ್ನು ತಪ್ಪಿಸಿ: ಸಿಹಿ ಪಾನೀಯಗಳು ಅಥವಾ ತಂಪು ಪಾನೀಯಗಳು ಫ್ರಕ್ಟೋಸ್ ಅನ್ನು ಹೊಂದಿರುತ್ತವೆ. ಫ್ರಕ್ಟೋಸ್ ದೈನಂದಿನ ಜೀವನದಲ್ಲಿ ಬಳಸುವ ಸಕ್ಕರೆಗಳಲ್ಲಿ ಒಂದಾಗಿದೆ. ಸಕ್ಕರೆಯನ್ನು ಹೆಚ್ಚು ಸೇವಿಸುವುದರಿಂದ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಕ್ಕರೆ ಬಳಸುವುದನ್ನು ಆದಷ್ಟು ಕಡಿಮೆ ಮಾಡಿ.
  • ಅರಿಶಿನ, ಶುಂಠಿ, ಮೆಂತ್ಯ ಪುಡಿ: ಅರಿಶಿನ ಪುಡಿ, ಒಣ ಶುಂಠಿ ಪುಡಿ ಮತ್ತು ಮೆಂತ್ಯ ಬೀಜಗಳ ಪುಡಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಈಗ ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅವುಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಇರಿಸಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಉಗುರು ಬೆಚ್ಚಗಿನ ನೀರಿನಿಂದ ತೆಗೆದುಕೊಳ್ಳಿ.
  • ಒತ್ತಡವನ್ನು ತಪ್ಪಿಸುವುದು: ಇತ್ತೀಚಿನ ದಿನಗಳಲ್ಲಿ ಒತ್ತಡ ಮತ್ತು ಯೂರಿಕ್ ಆಮ್ಲದ ನಡುವೆ ಸಂಬಂಧವಿದೆ. ದೈನಂದಿನ ಭಾವನಾತ್ಮಕ ಒತ್ತಡವು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಆದ್ದರಿಂದ' ವಿವಿಧ ಸಮಯ ನಿರ್ವಹಣಾ ವಿಧಾನಗಳನ್ನು ಬಳಸಿಕೊಂಡು ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries