ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚತುರ್ಥ ಚಾತುರ್ಮಾಸ್ಯ ಅಂಗವಾಗಿ ಸಂಗೀತೋತ್ಸವ ಕಾರ್ಯಕ್ರಮ ಗುರುವಾರ ಶ್ರೀ ಮಠದಲ್ಲಿ ಆರಂಭಗೊAಡಿತು. ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮ ಒಳಗೊಂಡAತೆ ಪ್ರಮುಖ ಸಂಗೀತಜ್ಞರು ಪಾಲ್ಗೊಂಡಿದ್ದರು. ನಂತರ ವಿದುಷಿಯರಾದ ಲಕ್ಷಿö್ಮÃ ವರುಣ್, ಲಕ್ಷಿö್ಮÃ ಆನಂದ್, ಕು. ತನ್ಮಯೀ ಉಪ್ಪಂಗಳ, ಕಲಾವತೀ ಅವಧೂತ್, ಡಾ. ಸುಮಾ ಸುಧೀಂದ್ರ ಅವರಿಂದ ಹಾಡುಗಾರಿಕೆ ನಡೆಯಿತು.
೨೬ರಂದು ಬೆಳಗ್ಗೆ ೯.೩೦ಕ್ಕೆ ವಿದುಷಿ ಇಳಾ ಸಂಗೀತ, ೧೦.೪೫ರಿಂದ ವಿದ್ವಾನ್ ಆನೂರ್ ಅನಂತಕೃಷ್ಣ ಶರ್ಮ, ವಿದ್ವಾನ್ ಫಣೀಂದ್ರ ಆನೂರ್, ವಿದ್ವಾನ್ ಶ್ರೀವಿದ್ಯಾ ಬಳಗದವರ ಹಾಗೂ ಸಂಜೆ ೪ರಿಂದ ಪ್ರಾರ್ಥನಾಶ್ರೀಪ್ರಕಾಶ್ ಬಳಗದಿಂದ ಹಾಡುಗಾರಿಕೆ ನಡೆಯುವುದು. ಸಂಜೆ ೬ರಿಂದ ಆನೂರ್ ಅನಂತಕೃಷ್ಣ ಶರ್ಮ ನಿರ್ದೇಶನದಲ್ಲಿ 'ಲಯಲಾವಣ್ಯ-ತಾಳವಾದ್ಯ'ಕಾರ್ಯಕ್ರಮ ನಡೆಯುವುದು. ಅಮಿತ್ ನಾಡಿಗ್ ಕೊಳಲು, ಕೆ.ಜೆ ದಿಲೀಪ್ ವಯಲಿನ್, ವಿದ್ವಾನ್ ಸುನಾದ್ ಆನೂರ್ ಕಂಜರಿ, ವಿದ್ವಾನ್ ಫಣೀಂರ ಘಟಂ, ನಾಗೇಂದ್ರ ಪ್ರಸಾದ್ ವೃದಂಗ, ಆನೂರ್‌ವಿನೋದ್ ಶ್ಯಾಮ್ ತಬಲಾ, ಆನೂರ್ ಪ್ರಬೋದ್ ಪಕ್‌ವಾಜ್, ಸೋಮಶೇಖರ ಜೋಯಿಸ ಕೊನ್ನಕ್ಕೋಲ್, ಚಿದಾನಂದ, ಪ್ರಣವ್ ಕಾರ್ತಿಕ್ ಮೋರ್ಸಿಂಗ್, ಅರುಣ್ ಕುಮಾರ್ ಡ್ರಮ್ಸ್, ತಿರುಮಲೆ ಶ್ರವಣ್, ವಿದ್ವಾನ್ ಸೈವಾಂಶಿ, ಸುಮಧುರ್ ಹಾಗೂ ಕಪಿಲ್ ಭಾರಧ್ವಾಜ್ ಪರ್ಕಶನ್‌ನಲ್ಲಿ ಸಹಕರಿಸುವರು.
ನಾಳೆ ಅಮೋಘ ಯಕ್ಷಗಾನ ಬಯಲಾಟ:
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚತುರ್ಥ ಚಾತುರ್ಮಾಸ್ಯ ಅಂಗವಾಗಿ 'ಗುರುತೇಜ ಗುರು ಕಾರುಣ್ಯ' ಅಮೋಘ ಯಕ್ಷಗಾನ ಬಯಲಾಟ ಜುಲೈ ೨೭ರಂದು ಸಂಜೆ ೫.೩೦ಕ್ಕೆ ಶ್ರೀಎಡನೀರು ಮಠದಲ್ಲಿ ಜರುಗಲಿದೆ. ಸಂಪಾಜೆಯ ಡಾ. ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಕಾರ್ಯಕ್ರಮವನ್ನು ಪ್ರಾಯೋಜಿಸಿ ಆಯೋಜಿಸಲಿದೆ.