ನವದೆಹಲಿ: 'ನೀಟ್-ಯುಜಿ' ಪರೀಕ್ಷೆಯನ್ನು ರದ್ದುಪಡಿಸುವುದಿಲ್ಲ. ಹಾಗೆಯೇ ಮರು ಪರೀಕ್ಷೆಯನ್ನು ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ಆದೇಶ ಹೊರಡಿಸಿದೆ.
ನವದೆಹಲಿ: 'ನೀಟ್-ಯುಜಿ' ಪರೀಕ್ಷೆಯನ್ನು ರದ್ದುಪಡಿಸುವುದಿಲ್ಲ. ಹಾಗೆಯೇ ಮರು ಪರೀಕ್ಷೆಯನ್ನು ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ಆದೇಶ ಹೊರಡಿಸಿದೆ.
ನೀಟ್-ಯುಜಿ' ಪರೀಕ್ಷೆಯನ್ನು ರದ್ದುಪಡಿಸಬೇಕು, ಮರು ಪರೀಕ್ಷೆ ನಡೆಸಬೇಕು ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಸೇರಿದಂತೆ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ನೇತೃತ್ವದ ಪೀಠವು ವಿಚಾರಣೆ ನಡೆಸಿತು.
ಪ್ರಶ್ನೆಪತ್ರಿಕೆ ಸೋರಿಕೆಯು ವ್ಯಾಪಕವಾಗಿದೆ ಎಂಬುದನ್ನು ತೋರಿಸಲು ಅಧಿಕೃತವಾಗಿ ಯಾವುದೇ ಆಧಾರ ಇದುವರೆಗೆ ಇಲ್ಲ. ಪಟ್ನಾ ಮತ್ತು ಹಜಾರಿಬಾಗ್‌ನಲ್ಲಿ ಒಂದಿಷ್ಟು ಲೋಪಗಳು ಆಗಿವೆ. ಆದರೆ, ವ್ಯವಸ್ಥೆಯ ಲೋಪವನ್ನು ತೋರಿಸಲು ಅವಷ್ಟೇ ಸಾಕಾಗುವುದಿಲ್ಲ ಎಂದು ಪೀಠವು ಪುನರುಚ್ಚರಿಸಿದೆ.
'ನೀಟ್-ಯುಜಿ' ಪರೀಕ್ಷೆಯ ಫಲಿತಾಂಶವು ದುರ್ಬಲವಾಗಿದೆ ಅಥವಾ ವ್ಯವಸ್ಥಿತ ಉಲ್ಲಂಘನೆಯಾಗಿದೆ ಎಂದು ತೀರ್ಮಾನಿಸಲು ಸಾಕ್ಷ್ಯಗಳ ಕೊರತೆಯಿಂದ ಸಾಧ್ಯವಾಗುವುದಿಲ್ಲ. ಜತೆಗೆ ದಾಖಲೆಯಲ್ಲಿರುವ ಡೇಟಾವು ಪ್ರಶ್ನೆ ಪತ್ರಿಕೆಯ ವ್ಯವಸ್ಥಿತ ಸೋರಿಕೆಯನ್ನು ಸೂಚಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.