ಕುಂಬಳೆ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾ ಘಟಕ ನಡೆಸಿದ ಉಪಜಿಲ್ಲಾ ಮಟ್ಟದ ವಾಚನ ಮಾಸಾಚರಣೆ ಸ್ಪರ್ಧೆಯಲ್ಲಿ ಹೈಸ್ಕೂಲ್ ವಿಭಾಗದ ಕವಿತಾಸ್ವಾದನಾ ಟಿಪ್ಪಣಿ ಸ್ಪರ್ಧೆಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ರಕ್ಷಾ ದ್ವಿತೀಯ ಸ್ಥಾನಗಳಿಸಿದ್ದಾಳೆ. ಈಕೆ ಸೂರಂಬೈಲು ಪೆರ್ಣೆ ನಿವಾಸಿ ಬಾಲಕೃಷ್ಣ - ಸಾವಿತ್ರಿ ದಂಪತಿಯ ಸುಪುತ್ರಿ.